ಉಡುಪಿ: ವ್ಯಕ್ತಿತ್ವ ವಿಕಸನ, ಜನರ ಸೇವೆ ಹಾಗೂ ಉತ್ತಮ ಬಾಂಧವ್ಯ ಬೆಳೆಸಲು ಲಯನ್ಸ್ ಕ್ಲಬ್ ಗಳು ಮಾದರಿ ಸಂಸ್ಥೆಯಾಗಿವೆ. ಇದನ್ನು ಎಲ್ಲರೂ ಉಪಯೋಗಿಸಿಕೊಂಡು ಇದರಲ್ಲಿ ತೊಡಗಿಸಿಕೊಳ್ಳಬೇಕು. ಬ್ರಹ್ಮಗಿರಿ ಲಯನ್ಸ್ ಕ್ಲಬ್ ಈ ರೀತಿ ಮಾದರಿ ಕ್ಲಬ್ ಆಗಿ ರೂಪುಗೊಂಡಿದೆ ಎಂದು 317 ಸಿ ಜಿಲ್ಲಾ ಗವರ್ನರ್ ಲಯನ್ ಎಂ ಕೆ ಭಟ್ ಹೇಳಿದರು.
ಅವರು ಶನಿವಾರದಂದು ಕ್ಲಬ್ಬಿಗೆ ಅಧಿಕೃತ ಭೇಟಿ ನೀಡಿದ ಬಳಿಕ ಚಿಟ್ಪಾಡಿಯ ಲಕ್ಷ್ಮಿ ಟವರ್ಸ್ ನ ಶ್ರೀ ಲಕ್ಷ್ಮಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಜಿಲ್ಲಾ ಗವರ್ನರ್ ಲಯನ್ ಎಂ.ಕೆ.ಭಟ್ ಅವರನ್ನು ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿ ನಿಶ್ಚಿತ್ ಶೆಟ್ಟಿ, ಕಿಡ್ನಿ ಡಯಾಲಿಸಿಸ್ ತೊಂದರೆಯಿಂದ ಬಳಲುತ್ತಿರುವ ಮಹಾಂತೇಶ್ ಹಾಗೂ ಇನ್ನಿತರರಿಗೆ ಕ್ಲಬ್ಬಿನ ವತಿಯಿಂದ ಧನಸಹಾಯ ಮಾಡಲಾಯಿತು.
ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿ ಡಿಸೆಂಬರ್ 10ರಂದು ಪುರಭವನದಲ್ಲಿ ನಡೆಯಲಿರುವ ಯಕ್ಷಗಾನದ ಮೂಲಕ ನಿಧಿ ಸಂಗ್ರಹಣೆಗೆ ಎಲ್ಲರ ಸಹಕಾರ ಕೋರಿದರು.
ಪ್ರಾಂತ್ಯ ಅಧ್ಯಕ್ಷ ಲಯನ್ ಹರಿಪ್ರಸಾದ್ ರಾಯ್, ವಲಯಾಧ್ಯಕ್ಷ ಲಯನ್ ಜಯಾನಂದ ಕೊಡವೂರು, ಲಿಯೊ ಅಧ್ಯಕ್ಷೆ ಲಿಯೋ ಅನಿಕಾ ರೈ, ಲಿಯೋ ಖಜಾಂಚಿ ಲಿಯೋ ಶ್ರೀನಿಧಿ ರಾವ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಲಯನ್ ಗೀತಾ ವಿ ರಾವ್ ಕ್ಲಬ್ಬಿನ ಸಂಕ್ಷಿಪ್ತ ವರದಿ ವಾಚಿಸಿದರು. ಖಜಾಂಚಿ ಲಯನ್ ವಿಜೇತಾ ರೈ, ವಂದಿಸಿದರು.