ಮಂಗಳೂರು: ಅರೆಹೊಳೆ ಪ್ರತಿಷ್ಠಾನವು ಆಯೋಜಿಸುವ ಸರಣಿ ಮಾಸಿಕ ಕಾರ್ಯಕ್ರಮ “ಬೆಳಕು” ಇದರ ಏಳನೇ ಕಾರ್ಯಕ್ರಮವು ನವೆಂಬರ್ 26 ರಂದು ಶನಿವಾರ ಬೊಂದೆಲ್ ನ ಮುಳಿಯಂಗಣದಲ್ಲಿ ಆಯೋಜಿಸಲಾಗಿದೆ.
ಮಹಿಳೆಯರ ಆರೋಗ್ಯದ ಮಾಹಿತಿ ನೀಡುವ ‘ಸುಖೀಭವ’ ಎನ್ನುವ ಕಾರ್ಯಕ್ರಮಕ್ಕೆ ಹರ್ಷ ಡಯಾಗ್ನೋಸ್ಟಿಕ್ ಸರ್ವೀಸಸ್ ನ ನಿರ್ದೇಶಕಿ ಡಾ.ಪ್ರಿಯದರ್ಶಿನಿ ರೈ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿಯನ್ನ ನೀಡಲಿದ್ದು ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: ಅರೆಹೊಳೆ ಪ್ರತಿಷ್ಠಾನ 301, ಮುಳಿಯಾಂಗಣ, ಮಹಾತ್ಮಾ ಗಾಂಧಿ ಕಾಲೇಜು ಸಮೀಪ, ಏರ್ ಪೋರ್ಟ್ ರಸ್ತೆ, ಬೊಂದೆಲ್,ಮಂಗಳೂರು-575008 ಸಂಪರ್ಕಿಸಬಹುದು.
ದೂರವಾಣಿ-9880252917/9632794477