ಬೆಂಗಳೂರು: ರಾಜ್ಯದ ನಾಡದೇವತೆಯ ಚಿತ್ರವನ್ನು ವಿವಿಧ ಚಿತ್ರಪಟಗಳಲ್ಲಿ ವಿವಿಧ ರೀತಿಯಾಗಿ ಚಿತ್ರಿಸಿರಿವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನಾಡದೇವತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರ ಅವಶ್ಯಕವಾಗಿತ್ತು.ಈ ಹಿನ್ನಲೆಯಲ್ಲಿ ನಾಡದೇವತೆಯ ಪ್ರಮಾಣಿತ ಮತ್ತು ಅಧಿಕೃತ ಚಿತ್ರ ಆಯ್ಕೆ ಮಾಡಿ ಶಿಫಾರಸ್ಸು ಮಾಡಲು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರರವರ ನೇತೃತ್ವದಲ್ಲಿ ಐವರು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಆಯ್ಕೆ ಮಾಡಿ ಶಿಫಾರಸ್ಸು ಮಾಡುವ ಚಿತ್ರವನ್ನು ಅಂತಿಮಗೊಳಿಸಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಉಪಯೋಗಿಸಲು ಹಾಗೂ ಶಾಲಾ-ಕಾಲೇಜುಗಳ ಗೋಡೆಯ ಮೇಲೆ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಡಾ.ಚೂಡಾಮಣಿ ನಂದಗೋಪಾಲ್, ಹೆಚ್.ಹೆಚ್ ಮ್ಯಾದರ್, ಬಾಬು ನಡೋಣಿ ಮತ್ತು ವಿ.ಎಸ್ ಕಡೇಮನಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.