ಉಡುಪಿ: ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ 2021-22 ನೇ ಸಾಲಿನಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ನೊಂದಾವಣೆ ಮಾಡಿಸಿದ ರೈತರ ವಿಮಾ ಪ್ರಕರಣಗಳಲ್ಲಿ 4642 ವಿಮಾ ಪ್ರಕರಣಗಳಿಗೆ ರೂ 6,15,57,981 ಪರಿಹಾರ ಮೊತ್ತವು ಅಕ್ಟೋಬರ್ 31 ರಂದು ದಿನಾಂಕ 31-10-2022 ರಿಂದ ಅಗ್ರಿಕ್ಚರ್ ವಿಮಾ ಕಂಪನಿಯ ವತಿಯಿಂದ ಪಾವತಿಯಾಗುತ್ತಿದೆ.
2021-22 ನೇ ಸಾಲಿನಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಒಟ್ಟು 5734 ಪ್ರಕರಣಗಳು ನೋಂದಣಿಯಾಗಿದ್ದು 1092 ಪ್ರಕರಣಗಳು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಬೆಳೆ ತಾಳೆಯಾಗದ ಪ್ರಕರಣಗಳೆಂದು ಗುರುತಿಸಲ್ಪಟ್ಟಿದ್ದು ,ಬೆಳೆ ಸಾಲ ಹೊಂದಿದ ರೈತರ ಪ್ರಕರಣಗಳು ಬ್ಯಾಂಕ್ ಪ್ರಬಂಧಕರ ಲಾಗಿನ್ ಗೆ ಬೆಳೆ ಪರೀಶೀಲನೆ ಹಾಗೂ ಮರು ತಪಾಸಣೆಗಾಗಿ ಹೋಗಿರುತ್ತವೆ. ವಿಮೆ ಮಾಡಿಸಿದ ರೈತರು ಒಂದು ವೇಳೆ ವಿಮಾ
ಪರಿಹಾರ ಮೊತ್ತ ಜಮಾ ಆಗದೇ ಇದ್ದಲ್ಲಿ ಬೆಳೆ ವಿಮೆ ಮಾಡಿಸಿದ ಶಾಖೆಯ ಪ್ರಬಂಧಕರನ್ನು ಸಂಪರ್ಕಿಸುವಂತೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.