ಉಡುಪಿ: ದೊಡ್ಡಣ್ಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನ.23 ರಂದು ಸಂಜೆ ಪಂಚದಶ ದುರ್ಗಾ ನಮಸ್ಕಾರ ಪೂಜೆ ಮತ್ತು ರಂಗಪೂಜೆ ದೀಪೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದ್ದು, ರಾತಿ ಅನ್ನಸಂತರ್ಪಣೆ ನಡೆಯಲಿದೆ.
15 ಎಂದರೆ (1+5=6) ಇದು ಲಕ್ಷ್ಮಿಯ ಸಂಕೇತ. ಲೋಕ ಕಲ್ಯಾಣ ಮತ್ತು ಭಕ್ತರಿಗಾಗಿ ಆಯೋಜಿಸಿರುವ ಈ ಪೂಜೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರು, ಉದ್ಯೋಗಾಂಕ್ಷಿಗಳು ಪಾಲ್ಗೊಂಡು ದೇವಿಯ ಅನುಗ್ರಹ ಪಡೆಯಬಹುದು. ಕಾರ್ತಿಕ ಮಾಸದಲ್ಲಿ ಒಂದು ದೀಪ ಬೆಳೆಗಿಸಿದರೆ ಒಂದು ಸಾವಿರ ದೀಪ ಬೆಳಗಿದ ಪುಣ್ಯ ಫಲ ದೊರೆಯಲಿದೆ ಎಂದು ಧರ್ಮದರ್ಶಿ ರಮಾನಂದ ಗುರೂಜಿ ಹೇಳಿದ್ದಾರೆ.
ಪಂಚವರ್ಣಗಳಿಂದ ರಚಿಸಲ್ಪಡುವ 15 ಮಂಡಲಗಳಲ್ಲಿ ಏಕಕಾಲದಲ್ಲಿ ಏಕಪಾತ್ರೆ ಪಂಚದೀಪದಲ್ಲಿ ಪಂಚದುರ್ಗೆಯರನ್ನು ಅಹ್ವಾನಿಸಿ ಪ್ರತಿಯೊಂದು ಮಂಡಲದಲ್ಲಿ ಸಪ್ತಶತಿ ಪರಾಯಣ, ದುರ್ಗಾ ಮೂಲ ಮಂತ್ರದಿಂದ ಆರಾಧಿಸಿ ಅನುಗ್ರ ಯಾಚಿಸುವ ಕಾರ್ತಿಕ ಮಾಸದ ವಿಶೇಷ ಪೂಜೆ ಇದಾಗಿದೆ. 15 ದುರ್ಗಾ ನಮಸ್ಕಾರ ಪೂಜೆಗಳಲ್ಲಿ 14 ಭಕ್ತರ ಸೇವೆಯಾಗಿ ಸಮರ್ಪಿತವಾದರೆ,1 ಕ್ಷೇತ್ರದ ವತಿಯಿಂದ ಜರುಗಲಿದೆ. 14ಮಂಡಲಗಳು ನವದುರ್ಗೆಯರ ಪ್ರತೀಕವಾಗಿದೆ.
ಅಂದು ಬೆಳಗ್ಗೆ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಚಂಡಿಕಾ ಯಾಗ, ಬ್ರಾಹ್ಮಣ, ಸುವಾಸಿನಿ, ಕನ್ನಿಕೆ, ದಂಪತಿ, ಕುಮಾರ, ಆಚಾರ್ಯ ಆರಾಧನೆಗಳು, ಸಂಜೆ 5.15 ಕ್ಕೆ ಋತ್ವಿಕ್ ವರ್ಣೆ, 5.45ಕ್ಕೆ ದೀಪ ಪ್ರಜ್ವಲನೆ, 7 ಕ್ಕೆ ಮಹಾಮಂಗಳಾರತಿ,7.30 ಕ್ಕೆ ರಂಗ ಪೂಜಾ ದೀಪೋತ್ಸವ ನೆರವೇರಲಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.