ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಪುರಸಭೆಗಳ ಅಧಿನಿಯಮ 1964-211ರ ಅನ್ವಯ ನಾಮಕರಣ ಮಾಡಲು ಸರ್ಕಾರ ಅನುಮತಿ ನೀಡಿ ಆದೇಶಿಸಿದೆ.
ಬನ್ನಂಜೆ ವೃತ್ತವು ನಾರಾಯಣಗುರು ವೃತ್ತ, ಕಲ್ಸಂಕ ವೃತ್ತವು ಮಧ್ವಾಚಾರ್ಯ ವೃತ್ತ, ಡಯಾನಾ ವೃತ್ತವು ವಾದಿರಾಜ ವೃತ್ತ, ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್ ಅನ್ನು ಕೋಟಿ ಚೆನ್ನಯ್ಯ ವೃತ ಹಾಗೂ ಬ್ರಹ್ಮಗಿರಿ ದೊಡ್ಡ ವೃತ್ತವು ಆಸ್ಕರ್ ಫೆರ್ನಾಂಡಿಸ್ ವೃತ್ತ ಎಂದು ಮರುನಾಮಕರಣ ಮಾಡಲಾಗಿದೆ.
ಪರ್ಕಳದಿಂದ ಕೋಡಂಗೆ ಹಾಗೂ ಕೋಡಂಗೆಯಿಂದ ಸರಳಬೆಟ್ಟುಗೆ ಹಾದುಹೋಗುವ ದಾರಿಯ ಮಧ್ಯದ ವೃತ್ತಕ್ಕೆ ಶ್ರೀರಾಮ ವೃತ್ತ ಎಂದು ನಾಮಕರಣ ಮಾಡಲು ಆದೇಶಿಸಲಾಗಿದೆ.


















