ಜಗತ್ತಿನಾದ್ಯಂತ ಹಿರಿ-ಕಿರಿ ಎಂಬ ಬೇಧವಿಲ್ಲದೆ ಎಲ್ಲರ ಹೃದಯಗಳನ್ನು ಗೆದ್ದ ಕಾಂತಾರ ಚಿತ್ರವು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಚಿತ್ರವೊಂದು ಎಷ್ಟು ಕೋಟಿ ಗಳಿಸಿತು ಎನ್ನುವುದನ್ನೇ ಲೆಕ್ಕ ಹಾಕುತ್ತಿದ್ದ ಈ ದಿನಗಳಲ್ಲಿ, ಹಿಂದಿನಂತೆ ಚಿತ್ರ ಎಷ್ಟು ದಿನ ಓಡಿತು ಎಂದು ಕೇಳುವುದನ್ನು ಮರೆತೇ ಬಿಟ್ಟಿದ್ದ ಕಾಲಘಟ್ಟದಲ್ಲಿ ಕಾಂತಾರ ಚಿತ್ರವು 50 ದಿನಗಳನ್ನು ಪೂರೈಸಿರುವುದು ಚಿತ್ರತಂಡದಲ್ಲಿ ಸಂತಸ ಮೂಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ ಎಲ್ಲರಿಗೂ ಧನ್ಯವಾದಗಳು. ಇದು ನಮ್ಮಲ್ಲಿ ಪ್ರತಿಯೊಬ್ಬರಿಂದ ಅಂಗೀಕರಿಸಲ್ಪಟ್ಟಿದೆ, ಒಡೆತನಹೊಂದಿದೆ ಮತ್ತು ವಾಸಿಸುತ್ತಿದೆ. ಪಂಜುರ್ಲಿ ಮತ್ತು ಗುಳಿಗ ದೈವದಿಂದ ನಾವು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೇವೆ. ಆವೇಶವು ಅಜೇಯವಾಗಿ ಉಳಿದಿದೆ” ಎಂದಿದ್ದಾರೆ.
ಕಾಂತಾರ ತನ್ನ ಮೊದಲ 49 ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ ಮತ್ತು ಭಾರತದಲ್ಲಿ ಸರಿಸುಮಾರು 294.89 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಎಲ್ಲಾ ಭಾಷೆ ಸೇರಿ ತನ್ನ ಐವತ್ತನೇ ದಿನದಂದು ಕಾಂತಾರ 0.85 ಕೋಟಿ ರೂ ನಿವ್ವಳ ಲಾಭ ಗಳಿಸಬಹುದು. ವಿಶ್ವದಾದ್ಯಂತ ಈ ಚಿತ್ರವು 370 ಕೋಟಿ ಗೂ ಅಧಿಕ ಗಳಿಕೆ ಮಾಡಿದೆ ಎಂದು ವರದಿಗಳು ಹೇಳಿವೆ.
ಏತನ್ಮಧ್ಯೆ, ಫ್ರಂಟ್ ಲೈನ್ ಪತ್ರಿಕೆಯು ಕಾಂತಾರ ಚಿತ್ರವನ್ನು ತನ್ನ ಕವರ್ ಸ್ಟೋರಿ ಮಾಡಿದೆ.
ಚಿತ್ರವು ನ.24 ರಂದು ಪ್ರೈಮ್ ಒಟಿಟಿಯಲ್ಲಿ ತೆರೆಕಾಣಲಿದೆ