ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲದಲ್ಲಿ, ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ನ ವಿದ್ಯಾರ್ಥಿ ಶಿಕ್ಷಕಿಯರಿಗೆ ಕಲಿಕಾ ತೊಂದರೆ (Learning disabilities), ಎಡಿಹೆಚ್ಡಿ (ADHD) ಹಾಗೂ ಆಟಿಸಂ (Autism) ನ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು, ಮಣಿಪಾಲದ ಡಿಪಾರ್ಟಮೆಂಟ್ ಆಫ್ ಕ್ಲಿನಿಕಲ್ ಸೈಕೋಲೊಜಿ, (MCHP) ಅಸಿಸ್ಟೆಂಟ್ ಪ್ರೊಫೆಸರ್, ಡಾ. ದೀಪಾ ಫ್ರಾಂಕ್ರವರು ನಡೆಸಿದರು. ಅವರು ಪೂರ್ವ ಪ್ರಾರ್ಥಮಿಕ ಶಾಲೆಯ ಮಕ್ಕಳಲ್ಲಿ ಈ ಕಲಿಕಾ ತೊಂದರೆಯನ್ನು ಹೇಗೆ ಗುರುತಿಸುವುದು?, ಮಕ್ಕಳೊಂದಿಗೆ ಹೇಗೆ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು?, ಆಟಿಸಂ ಆರಂಭದಲ್ಲೇ ಗುರುತಿಸುವುದು ಹೇಗೆ? ನಂತರದ ನಿವವಹಣ್ ಹೇಗೆ? ಮತ್ತು ಪರಿಹಾರ ಬೋಧನೆಯ ಬಗ್ಗೆಯ ತಿಳಿಯಪಡಿಸಿದರು. ಕೆಲವೊಮ್ಮೆ ಮಕ್ಕಳು ಓದುವಾಗ ಹಾಗೂ ಬರೆಯುವಾಗ ‘ಠಿ’ ಮತ್ತು ‘q’, ‘b’ ಮತ್ತು ‘ಜ’ ವ್ಯತ್ಯಾಸ ಗೊತ್ತಿಲ್ಲದೆ ವಿಚಿತ್ರವಾಗಿ ಓದಬಹುದು. ಇದನ್ನು ಸರಿಪಡಿಸಲು ವಿಶಿಷ್ಟ ಟ್ರೈನಿಂಗ್ ಪಡೆದ ಟೀಚರ್ಸ್ ಗಳ ಸಹಾಯ ಹಾಗೂ ಹೆತ್ತವರ ಸಹಾಯ ಕೂಡ ತುಂಬಾ ಅಗತ್ಯವಿದೆ ಎಂದು ಹೇಳಿದರು. ‘ತಾರೆ ಜಮೀನ್ ಪರ್” ಸಿನಿಮಾವನ್ನು ಉದಾಹರಣೆಗಾಗಿ ಕೊಟ್ಟರು. ಕಾರ್ಯಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸುನೀತಾ ಹಾಗೂ ಅಧ್ಯಾಪಕಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕಿ ಶ್ರೀಮತಿ ಚಂದ್ರಕಲಾರವರು ನಿರೂಪಿಸಿದರು.