ಮಂಗಳೂರು: ಖಾಸಗಿ ಬಸ್ ಗಳ ನಡುವೆ ಅಪಘಾತ; ಪ್ರಯಾಣಿಕರು ಅಪಾಯದಿಂದ ಪಾರು

ಮಂಗಳೂರು: ಎರಡು ಖಾಸಗಿ ಬಸ್ ಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಮಂಗಳೂರು ನಗರದ ಅಂಬೇಡ್ಕರ್ ಸರ್ಕಲ್ ಬಳಿ ಇಂದು ಬೆಳಗ್ಗೆ ನಡೆದಿದೆ.

ಅಪಘಾತದಲ್ಲಿ ಎರಡು ಬಸ್ಸುಗಳಿಗೆ ಹಾನಿ ಉಂಟಾಗಿದ್ದು, ಚಾಲಕ ಸೇರಿದಂತೆ ಬಸ್ ‌ನಲ್ಲಿದ್ದ ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದಿಂದಾಗಿ ವಾಹನ ಸಂಚಾರದಲ್ಲಿ ಸ್ವಲ್ಪ ಸಮಯ ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಠಾಣೆ ಪೊಲೀಸರು ಬಸ್ಸುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.