ನಿಟ್ಟೆ ತಾಂತ್ರಿಕ ಕಾಲೇಜಿಗೆ ಇಪಿಎಫ್ ಸಂಸ್ಥೆಯಿಂದ ಪ್ರಶಂಸನಾ ಪ್ರಮಾಣಪತ್ರ

ನಿಟ್ಟೆ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯಡಿಯಲ್ಲಿ ಬರುವ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಸಂಸ್ಥೆಯ ಉಡುಪಿ ಘಟಕವು ತಮ್ಮ ವಿಭಾಗದಡಿಯಲ್ಲಿ ದೊಡ್ಡ ಸಂಸ್ಥೆಗಳ ಪೈಕಿ ಇಪಿಎಫ್ ನ ನಿಬಂಧನೆಗಳು ಹಾಗೂ ಯೋಜನೆಗಳನ್ನು ಯಶಸ್ವಿಯಾಗಿಸುವಲ್ಲಿ ಉತ್ತಮಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವನ್ನು ಗುರುತಿಸಿ ಪ್ರಶಂಸನಾ ಪ್ರಮಾಣಪತ್ರ ನೀಡಿದೆ.

ಇತ್ತೀಚೆಗೆ ಉಡುಪಿಯಲ್ಲಿ ನಡೆದ ಉಡುಪಿ ಇಪಿಎಫ್ ಪ್ರಾದೇಶಿಕ ಕಛೇರಿಯ 70ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಮಾಣಪತ್ರವನ್ನು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಬಿ.ಆರ್ ಅವರಿಗೆ ಉಡುಪಿ ಜಿಲ್ಲಾ ಪೋಲೀಸ್ ವರಿ‍ಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ನೀಡಿದರು.