ಕಿನ್ನಿಗೋಳಿ: ದಾರಿಯಲ್ಲಿ ನಡೆದುಕೊಂದು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಕಾರೊಂದು ಗುದ್ದಿದ್ದು, ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಗಾಯಗೊಂಡ ಮಹಿಳೆಯನ್ನು ಕೆಮ್ರಾಲ್ ಮನೋಲಿ ಬಲ್ಲೆ ನಿವಾಸಿ ಜಯಂತಿ ಶೆಟ್ಟಿ ಎಂದು ಗುರುತಿಸಲಾಗಿದೆ.
ಗುರುವಾರದಂದು ಕಿನ್ನಿಗೋಳಿ ಚರ್ಚ್ ಬಳಿ ಸಂತೆ ಮಾರುಕಟ್ಟೆ ನಡೆಯುತ್ತಿದ್ದು, ಜಯಂತಿ ಶೆಟ್ಟಿ ಎಂಬವರು ತರಕಾರಿ ಹಿಡಿದುಕೊಂಡು ನಡೆದು ಬರುತ್ತಿದ್ದ ಸಂದರ್ಭದಲ್ಲಿ ಕಿನ್ನಿಗೋಳಿ ಪೇಟೆಯಿಂದ ಮೂರುಕಾವೇರಿ ಕಡೆಗೆ ವೇಗವಾಗಿ ತೆರಳುತ್ತಿದ್ದ ಬ್ರೀಜಾ ಕಾರು ಮಹಿಳೆಗೆ ಗುದ್ದಿದ್ದು, ಮಹಿಳೆಯು ಎತ್ತಿ ಎಸೆಯಲ್ಪಟ್ಟಿರುವುದರಿಂದ ಗಂಭೀರ ಗಾಯಗಳಾಗಿವೆ. ಕಾರು ಪಕ್ಕದ ಕಟ್ಟೆಗೆ ಡಿಕ್ಕಿ ಹೊಡೆದಿದ್ದು ಮುಂಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ನಾಲ್ಕು ಜನರಿದ್ದು, ಅವರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗಾಯಾಳುಗಳೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.