ಮಂಗಳೂರು: ಎಲ್ಲರೂ ಒಂದಾಗಿ ಸಂಭ್ರಮಿಸುವ ಹಬ್ಬಗಳು ಭಾಂದವ್ಯವನ್ನು ಗಟ್ಟಿಗೊಳಿಸುತ್ತವೆ ಎಂದು ಫ್ಲೋರಿಡಾ ತುಳು ಎಸೋಸಿಯೇಷನ್ ಸಂಸ್ಥಾಪಕಿ ಶ್ರೀವಲ್ಲಿ ರೈ ಮಾರ್ಟಲ್ ಹೇಳಿದರು.
ಅವರು ಅರೆಹೊಳೆ ಪ್ರತಿಷ್ಠಾನ ಆಯೋಜಿಸಿದ್ದ ನಂದಗೋಕುಲ ದೀಪಾವಳಿ ಸಂಭ್ರಮದಲ್ಲಿಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿಅರೆಹೊಳೆ ಪ್ರತಿಷ್ಠಾನವು ಪ್ರತಿವರ್ಷ ಬಾಲಪ್ರತಿಭೆಗಳಿಗೆ ನೀಡುವ ನಂದಗೋಕುಲ ದೀಪಾವಳಿ ಪುರಸ್ಕಾರವನ್ನು ತುಮಕೂರಿನ ಬಾಲಪ್ರತಿಭೆ ಆರ್ಯ ಆರ್ ಭಟ್ ಇವರಿಗೆ ನೀಡಲಾಯಿತು.
ಇನ್ನೂರ್ವ ಅತಿಥಿ ದಿನೇಶ್ ಹೊಳ್ಳ ಮಾತನಾಡಿ, ಮಕ್ಕಳನ್ನು ಪ್ರೊತ್ಸಾಹಿಸುವ ಅರೆಹೊಳೆ ಪ್ರತಿಷ್ಠಾನದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ನಂದಗೋಕುಲ ದೀಪಾವಳಿ ಪ್ರಶಸ್ತಿ ಪುರಸ್ಕೃತ ಬಾಲಪ್ರತಿಭೆಗಳಾದ ಆರ್ಯ ಆರ್ ಭಟ್ ಮತ್ತು ಗಾರ್ಗಿ ಆರ್ ಭಟ್ ಇವರಿಂದ ಮಂಕುತಿಮ್ಮನ ಕಗ್ಗ ಪ್ರದರ್ಶನಗೊಂಡಿತು.
ನಂದಗೋಕುಲದ ಕಲಾವಿದರ ಪೋಷಕರಿಂದ ವಿಶೇಷವಾದ ನೃತ್ಯಕಾರ್ಯಕ್ರಮ ಹಾಗು ಹರಿನ್ ಕೊಟ್ಟಾರಿ ಮೂಡುಶೆಡ್ಡೆಇವರಿಂದ ಜಾದು ಪ್ರದರ್ಶನಗೊಂಡಿತು. ಇದೇ ಸಂದರ್ಭದಲ್ಲಿ ನಂದಗೋಕುಲದ ಕಲಾವಿದರು ಧರಿಸುವ ಬ್ಯಾಡ್ಜನ್ನು ಶ್ರೀವಲ್ಲಿ ರೈ ಮಾರ್ಟಲ್ ರವರು ಬಿಡುಗಡೆಗೊಳಿಸಿದರು. ದಿನೇಶ್ ಹೊಳ್ಳ ಲಾಂಚನ ರೂಪಿಸಿದರು. ಮುಂದಿನ ವರ್ಷ ಜನವರಿ 26ರಂದು ಅರೆಹೊಳೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಂಗಶಾಲೆಯ ಬಗ್ಗೆ ಮಾಹಿತಿ ನೀಡಲಾಯಿತು.
ಶ್ವೇತಾ ಅರೆಹೊಳೆ, ಕೆ. ಸಿ. ಪ್ರಭು, ಗೀತಾ ಅರೆಹೊಳೆ ಡಾ.ರಾಮಕೃಷ್ಣ ಭಟ್, ಶ್ರೀಮತಿ ಅಖಿಲಾ ರಾಮಕೃಷ್ಣ ಭಟ್‌ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಿಖಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ ಪ್ರಶ್ವಿನಿ ಎಸ್ ಆಚಾರ್ಯ ಧನ್ಯವಾದ ಸಮರ್ಪಿಸಿದರು.