ಉಡುಪಿ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಬೃಹತ್ ತಿರಂಗಾ ಬೈಕ್ ಜಾಥಾವು ಅಕ್ಟೋಬರ್ 29 ರಂದು ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಜಾಥಾದಲ್ಲಿ ತಮ್ಮ ಬೈಕ್ ಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಾಥಾದ ಬಳಿಕ ಕಾರ್ಕಳದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ 6 ಮಂದಿ ಯೋಧರನ್ನು ಗೌರವಿಸಲಾಯಿತು.
ನಿಕೇತ್ ರಾಜ್ ಮೌರ್ಯ ಮತ್ತು ಸುಧೀರ್ ಕುಮಾರ್ ಮರೋಳಿ ದಿಕ್ಸೂಚಿ ಭಾಷಣ ಮಾಡಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ಶಾಸಕ ಯುಟಿ ಖಾದರ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಮಿಥುನ್ ರೈ, ಪ್ರತಿಭಾ ಕುಳಾಯಿ, ಸದಾಶಿವ ದೇವಾಡಿಗ, ಪ್ರಖ್ಯಾತ್ ಶೆಟ್ಟಿ, ಸುಧಾಕರ್, ನವೀನ್ ಚಂದ್ರ ಜೆ ಶೆಟ್ಟಿ, ಅಝೀಜ್ ಹೆಜಮಾಡಿ, ಹರೀಶ್ ಕಿಣಿ, ನವೀನ್ ಚಂದ್ರ ಸುವರ್ಣ, ಸಂತೋಷ್ ಮೂಲ್ಯ, ದಿನಕರ ಹೇರೂರು, ರಮೇಶ್ ಕಾಂಚನ್, ನಾಸಿರ್, ಬಿಪಿನ್ ಚಂದ್ರಪಾಲ್, ಮಮತಾ ಗಟ್ಟಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.