ಉಡುಪಿ: ತುಳುನಾಡಿನ ಬಹು ನಿರೀಕ್ಷಿತ ಶಕಲಕ ಬೂಂ ಬೂಂ ಚಲನಚಿತ್ರ ಡಿಸೆಂಬರ್ 16 ರಂದು ಬಿಡುಗಡೆಗೊಳ್ಳಲಿದೆ. ತುಳು ಚಲನಚಿತ್ರ ಇತಿಹಾಸದಲ್ಲೆ ಮೊದಲ ಬಾರಿಗೆ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೀನೀ ಪಾತ್ರದಲ್ಲಿರುವ ಬೋಳಾರ್ ಅವರ ಪೋಸ್ಟರ್ ಅನ್ನು ಕಾಂತಾರ ಚಿತ್ರದ ನಾಯಕನ ತಾಯಿಯ ಪಾತ್ರ ಮಾಡಿದ ಮಾನಸಿ ಸುಧೀರ್ ದೊಡ್ದಣ್ಣಗುಡ್ಡೆಯಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಚಿತ್ರದ ನಿರ್ಮಾಪಕ ನಿತ್ಯಾನಂದ ನರಸಿಂಗೆ, ನರಸಿಂಗೆ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವನ್ಕಾರ್, ಆನಂದ ನಾಯಕ್, ಸುಧೀರ್ ಕೊಡವೂರ್, ನಿರ್ದೇಶಕ ಶ್ರೀಶ ಏಳ್ಳಾರೆ, ಚಿತ್ರದ ಕಥೆಗಾರ ಸುನಿಲ್ ಕಡ್ತಲ, ಸಂಗೀತ ನಿರ್ದೇಶಕ ಡಾಲ್ವಿನ್ ಕೊಳಲಗಿರಿ, ನಾಯಕ ನಟ ಗಾಡ್ವಿನ್ ಸ್ಪಾರ್ಕಲ್, ಡಾ. ಶ್ರೀಧರ್, ಯಜ್ಞೇಶ್ ಶೆಟ್ಟಿ, ನಿರ್ದೇಶಕ ತಂಡದಿಂದ ವಿಘ್ನೇಶ್ ಕುಲಾಲ್, ಅಭಿಲಾಶ್, ಲೋಕೇಶ್, ಸುಶಾಂತ್, ಪ್ರಜ್ವಲ್, ಗಾಯತ್ರಿ ನಾಯಕ್, ಶರಣ್ಯ, ಶ್ರಾವ್ಯ ಉಪಸ್ಥಿತರಿದ್ದರು.
ಈ ಚಲನಚಿತ್ರಕ್ಕೆ ಛಾಯಾಗ್ರಾಹಕರಾಗಿ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಇವರ ಕ್ಯಾಮರಾ ಕೈಚಳಕವಿದೆ. ಪ್ರಜ್ವಲ್ ಸುವರ್ಣ ಅವರ ಸಂಕಲನವಿದೆ.
ಚಿತ್ರದಲ್ಲಿ ರೂಪಶ್ರೀ ವರ್ಕಾಡಿ, ವಸಂತ್ ಮುನಿಯಾಲ್, ಲಕ್ಷಾ ಶೆಟ್ಟಿ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಪ್ರವೀಣ್ ಆಚಾರ್ಯ,ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ಅಭಿನಯಿಸಿದ್ದಾರೆ.