ಅಹಮದಾಬಾದ್: ಭಾನುವಾರ ಸಂಜೆ ಗುಜರಾತ್ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದು ಸುದ್ದಿಯು ದೇಶಾದ್ಯಂತ ತಲ್ಲಣವನ್ನು ಸೃಷ್ಟಿಸಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಎನ್ಡಿಆರ್ಎಫ್ ಸೇರಿದಂತೆ ರಕ್ಷಣಾ ತಂಡಗಳು ಘಟನೆಯ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ ಮತ್ತು ಸುಮಾರು ಇನ್ನೂರು ಜನರ ತಂಡವು ರಾತಿಯಿಡೀ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ ಇದುವರೆಗೆ 150 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾನುವಾರ ರಾತ್ರಿ ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿ ಪರಿಶೀಲನಾ ಸಭೆ ನಡೆಸಿದ್ದಾರೆ. ಇದುವರೆಗೆ ಕನಿಷ್ಠ 132 ಸಾವುಗಳು ವರದಿಯಾಗಿವೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘ್ವಿ ಸೋಮವಾರ ಬೆಳಗ್ಗೆ ಹೇಳಿದ್ದಾರೆ.
મોરબી પુલ દૂર્ઘટના સ્થળે પુરજોશમાં ચાલી રહી છે રાહત અને બચાવ કામગીરી, તંત્ર સતત ખડેપગે..#MorbiBridge pic.twitter.com/RF4ctClywC
— Gujarat Information (@InfoGujarat) October 31, 2022
ವಡೋದರಾದಲ್ಲಿ ಟಾಟಾ-ಏರ್ಬಸ್ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ಮೋದಿ ಭಾನುವಾರ ಮುಂಜಾನೆ ತಮ್ಮ ತವರು ರಾಜ್ಯಕ್ಕೆ ಆಗಮಿಸಿದ್ದರು. ಸಾವಿಗೆ ಸಂತಾಪ ಸೂಚಿಸಿದ ಅವರು, ಘಟನೆಯ ನಂತರ ರಕ್ಷಣಾ ತಂಡಗಳನ್ನು ತುರ್ತು ಸಜ್ಜುಗೊಳಿಸುವಂತೆ ಕೋರಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ 2 ಲಕ್ಷ ರೂ ಮತ್ತು ಗಾಯಾಳುಗಳಿಗೆ 50 ಸಾವಿರ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.
ದುರಸ್ತಿಯ ಬಳಿಕ ಸೇತುವೆಯು ಕಳೆದ ವಾರವಷ್ಟೇ ಪುನರಾರಂಭಗೊಂಡಿತ್ತು ಆದರೆ ಅದಕ್ಕೆ ತೆರವು ಪ್ರಮಾಣಪತ್ರವಿತ್ತೆ ಎಂಬುದು ಸ್ಪಷ್ಟವಾಗಿಲ್ಲ. ಅಪಘಾತದ ಸಮಯದಲ್ಲಿ ಜನದಟ್ಟಣೆ ಹೆಚ್ಚಿತ್ತು ಎನ್ನಲಾಗಿದೆ. ಸೇತುವೆಯನ್ನು 15 ವರ್ಷಗಳ ಕಾಲ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಓರೆವಾ ಕಂಪನಿಗೆ ನೀಡಲಾಗಿತ್ತು. ನವೀಕರಣಕ್ಕಾಗಿ ಈ ವರ್ಷದ ಮಾರ್ಚ್ನಲ್ಲಿ ಸೇತುವೆಯನ್ನು ಮುಚ್ಚಲಾಗಿತ್ತು. ಅಕ್ಟೋಬರ್ 26 ರಂದು ಆಚರಿಸಲಾದ ಗುಜರಾತಿ ಹೊಸ ವರ್ಷದಂದು ಇದನ್ನು ಪುನಃ ತೆರೆಯಲಾಯಿತು. ಸೇತುವೆಯನ್ನು ತೆರೆಯಲು ಕಂಪನಿಗೆ ಫಿಟ್ನೆಸ್ ಪ್ರಮಾಣಪತ್ರವನ್ನು ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ನಮಗೆ ತಿಳಿದಿಲ್ಲ ಎಂದು ಮೊರ್ಬಿ ಮುಖ್ಯ ಭದ್ರತಾ ಅಧಿಕಾರಿ ಸಂದೀಪ್ ಸಿಂಗ್ ಝಾಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.