ಕೆಮ್ಮಣ್ಣು: ಗುಜ್ಜರಬೆಟ್ಟು ಎಸ್.ಸಿ. ಕಾಲನಿಯಲ್ಲಿ ದೀಪಾವಳಿ ತುಡರ್ ಕಾರ್ಯಕ್ರಮ

ಕೆಮ್ಮಣ್ಣು: ಶಾಸಕ ಕೆ. ರಘುಪತಿ ಭಟ್ ರವರ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ಕೆಮ್ಮಣ್ಣು ಗುಜ್ಜರಬೆಟ್ಟು ಪರಿಶಿಷ್ಟ ಜಾತಿ ಕಾಲನಿಯಲ್ಲಿ ದೀಪಾವಳಿ ತುಡರ್ ಕಾರ್ಯಕ್ರಮ ನಡೆಯಿತು.

ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚಿಸಿದರು.

ಈ ಸಂದರ್ಭದಲ್ಲಿ ದಲಿತ ಚಿಂತಕ ಜನಪರ ಹೋರಾಟಗಾರ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ, ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಅಧ್ಯಕ್ಷ ಗೋಕುಲ್ ದಾಸ್, ಕೇದಾರೋತ್ಥಾನ ಟ್ರಸ್ಟ್ ನ ಕೋಶಾಧಿಕಾರಿ ರಾಘವೇಂದ್ರ ಕಿಣಿ, ಟ್ರಸ್ಟಿಗಳಾದ ಮಹೇಶ್ ಠಾಕೂರ್, ದಿನಕರ್ ಬಾಬು, ಗುರಿಕಾರರಾದ ಸಂಜು ಉಪಸ್ಥಿತರಿದ್ದರು.