ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಉಡುಪಿ ಮತ್ತು ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಈ ಎರಡು ಕ್ಲಬ್ ಗಳ ಸಮಾಗಮವು ಇತ್ತೀಚಿಗೆ ಉಡುಪಿಯ ಬಲೈಪಾದೆ ನಿತ್ಯಾನಂದ ಆರ್ಕೇಡ್ ಕಾಂಪ್ಲೆಕ್ಸ್ ಉದ್ಯಾವರ ಇಲ್ಲಿ ನೆರವೇರಿತು.
ಜಿಲ್ಲಾ 317ಸಿಯ ಪ್ರಥಮ ಉಪ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೆಲಿಯೋ ಮುಖ್ಯ ಅತಿಥಿಯಾಗಿ ಮಾತನಾಡಿ, ಈ ರೀತಿಯ ಸಂಗಮ ಎರಡು ಜಿಲ್ಲೆಗಳ ಲಯನ್ ಸದಸ್ಯರು ಸಮಾಜಕ್ಕೆ ಇನ್ನೂ ಹೆಚ್ಚಿನ ಅಗತ್ಯ ಸೇವೆಗಳನ್ನು ಮಾಡುವ ಬಗ್ಗೆ ಮತ್ತು ಕ್ಲಬ್ ಗಳ ಮಧ್ಯೆ ಅವಿನಾಭಾವ ಸಂಬಂಧ ಬೆಳೆಸುವ ಬಗ್ಗೆ ಸಹಕಾರಿ. ಇನ್ನು ಮುಂದೆ ಹೆಚ್ಚಿನ ಕ್ಲಬ್ ಗಳು ಈ ರೀತಿ ಸಮಾಗಮ ನೆರವೇರಿಸಿ ಎರಡು ಜಿಲ್ಲೆಗಳ ಸಂಬಂಧ ಸದೃಢವಾಗಲಿ ಎಂದು ಹಾರೈಸಿದರು.
ವೇದಿಕೆಯ ಮೇಲೆ ಬ್ರಹ್ಮಗಿರಿ ಕ್ಲಬ್ ನ ಅಧ್ಯಕ್ಷ ಉಮೇಶ್ ನಾಯಕ್, ಕಾರ್ಯದರ್ಶಿ ಲಯನ್ ಗೀತಾ ವಿ ರಾವ್, ಖಜಾಂಚಿ ಲಯನ್ ವಿಜೇತಾ ರೈ, ಪ್ರಾಂತ್ಯ 6ರ ಅದ್ಯಕ್ಷ ಲಯನ್ ಹರಿಪ್ರಸಾದ್ ರೈ ಮತ್ತು ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ನ ಅಧ್ಯಕ್ಷ ಲಯನ್ ಸುಮಿತ್ರಾ ವಿ ಶೆಟ್ಟಿ ,ಖಜಾಂಚಿ ಲಯನ್ ರಿತೇಶ್ ಯು ರಾವ್, ಹಾಗೂ ಲಯನ್ ಸುಜಿತ್ ಕುಮಾರ್, ಮಂಗಳೂರು ವಲಯ ಮೂರರ ಅಧ್ಯಕ್ಷ ಲಯನ್ ಜಗದೀಶ್ ಪೈ ಹಾಜರಿದ್ದರು.
ಲಯನ್ ಉಮೇಶ್ ನಾಯಕ್ ಸ್ವಾಗತಿಸಿ, ಲಯನ್ ಸುಜಿತ್ ಕುಮಾರ್ ವಂದಿಸಿದರು. ಲಯನ್ ಇಂದಿರಾ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಮಾಗಮದ ಸಮಯದಲ್ಲಿ ಕಾರುಣ್ಯ ಆಶ್ರಮ ಕಟ್ಪಾಡಿ ಇವರಿಗೆ ದೇಣಿಗೆ ರೂಪದಲ್ಲಿ ಊಟದ ಸಾಮಗ್ರಿಗಳನ್ನು ವಿತರಿಸಲಾಯಿತು.