ಪೆರಂಪಳ್ಳಿ: ಉಚಿತ ನೇತ್ರ ತಪಾಸಣಾ ಶಿಬಿರ

ಪೆರಂಪಳ್ಳಿ: ಯುವಕ ಮಂಡಲ ಪೆರಂಪಳ್ಳಿ, ನೇತ್ರ ವಿಭಾಗ ಕೆಎಂಸಿ ಮಣಿಪಾಲ ಹಾಗೂ ಐ-ನೀಡ್ಸ್ ಆಪ್ಟಿಕಲ್ಸ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಕಾರ್ಯಕ್ರಮವು ಯುವಕ ಮಂಡಲದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೆಎಂಸಿಯ ನೇತ್ರ ತಜ್ಞ ಡಾ. ಆಶ್ರಿತ್ ಕಾಮತ್, ಡಾ ನೀಲಾಯಿ ರೆಡ್ಡಿ, ಐ-ನೀಡ್ಸ್ ಆಪ್ಟಿಕಲ್ಸ್ ನ ಗಜಾನನ ನಾಯಕ್, ಗ್ರಾಮ ವನ್ ಕೇಂದ್ರದ ಇಮ್ತಿಯಾಜ್, ಯುವಕ ಮಂಡಲದ ಅಧ್ಯಕ್ಷ ಡೆನಿಸ್ ಪ್ರಸನ್ನ, ಗೌರವಾಧ್ಯಕ್ಶ ಹರಿಕೃಷಣ ಶಿವತ್ತಾಯ, ಗಂಗಾಧರ ಆಚಾರ್ಯ, ನಗರಸಭಾ ನಾಮ ನಿರ್ದೇಶಿತ ಸದಸ್ಯೆ ಅರುಣಾ ಸುಧಾಮ, ಕಾರ್ಯದರ್ಶಿ ರಕ್ಷಿತ್ ಕೋಟ್ಯಾನ್, ರಾಘವೇಂದ್ರ ಭಟ್, ಪ್ರಶಾಂತ್ ಭಟ್, ವಿಜಯ್ ಕುಮಾರ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸುಮಾರು 175 ಮಂದಿ ಈ ಶಿಬಿರದ ಉಪಯೋಗವನ್ನು ಪಡೆದರು.