ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಸನ್ಮಾನ

ಉಡುಪಿ, ಮೇ 27: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು “ಎ” “ಬಿ” “ಒ” ರಕ್ತದ ಗುಂಪನ್ನು ಕಂಡುಹಿಡಿದ ಡಾ. ಕಾರ್ಲ್ ಲ್ಯಾಂಡ್ ಸ್ಟೇನಿಯರ್‍ರವರ ಹುಟ್ಟುಹಬ್ಬವನ್ನು ಸ್ಮರಿಸಿ ಪ್ರತಿ ವರ್ಷ ವಿಶ್ವದಾದ್ಯಂತ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೇ ಇನ್ನೊಬ್ಬರ ಅಮೂಲ್ಯವಾದ ಜೀವವನ್ನು ಉಳಿಸಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡುವ ರಕ್ತದಾನಿಗಳಿಗೆ ಗೌರವ ಮತ್ತು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವ ಮುಖ್ಯ ಉದ್ದೇಶವೇ ವಿಶ್ವ ರಕ್ತದಾನಿಗಳ ದಿನಾಚರಣೆ.

ಈ ವರ್ಷ ಜೂನ್ 14 ರಂದು ಸ್ವಯಂಪ್ರೇರಿತರಾಗಿ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೇ ಇನ್ನೊಬ್ಬರ ಅಮೂಲ್ಯವಾದ ಜೀವವನ್ನು ಉಳಿಸಬೇಕೆಂಬ ಧ್ಯೇಯವನ್ನು ಇಟ್ಟುಕೊಂಡು ರಕ್ತದಾನವನ್ನು ಮಾಡಿರುವ ರಕ್ತದಾನಿಯನ್ನು ಗುರುತಿಸಿ ಗೌರವಿಸಲು ಹಾಗೂ ಪ್ರೋತ್ಸಾಹಿಸಲು ನಿರ್ಧರಿಸಲಾಗಿದ್ದು, 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಗೌರವಿಸಲಾಗುವುದು. ಆದ್ದರಿಂದ ಕನಿಷ್ಠ 25 ಬಾರಿಗೂ ಮೇಲ್ಪಟ್ಟು ರಕ್ತದಾನ ಮಾಡಿರುವ ದಾನಿಗಳು ರಕ್ತದಾನ ಮಾಡಿರುವ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಖಡ್ಡಾಯವಾಗಿ ಲಗತ್ತಿಸಿ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ, ರೆಡ್ ಕ್ರಾಸ್ ಭವನ, ಅಜ್ಜರಕಾಡು, ಉಡುಪಿ ಈ ವಿಳಾಸಕ್ಕೆ ಜೂನ್ 8 ರ ಒಳಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2532222 ಅನ್ನು ಸಂಪರ್ಕಿಸುವಂತೆ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಪ್ರಕಟಣೆ ತಿಳಿಸಿದೆ.