ಉಡುಪಿ: ಧ್ವನಿ ಬೆಳಕು ಸಂಯೋಜಕರ ಸಂಘಟನೆ ವತಿಯಿಂದ ವೈಭವದ ಮೆರವಣಿಗೆ

ಉಡುಪಿ: ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ , ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ದಿ ಸಂಘ ಗಂಗಾವತಿ, ಕೇಂದ್ರ ಕಛೇರಿ ವಿಜಯಪುರ, ಆಲ್ ಇಂಡಿಯಾ ಟೆಂಟ್ ಎಂಡ್ ಡೆಕೋರೇಷನ್ ವೆಲ್ ಫೇರ್ ಅಸೋಷಿಯನ್ ನವದೆಹಲಿ ಹಾಗೂ ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಇದರ ಉಡುಪಿ ಜಿಲ್ಲಾ ದಶಮಾನೋತ್ಸವ ಪ್ರಯುಕ್ತ ಉಡುಪಿ ವೈಭವಕ್ಕೆ ಉಡುಪಿ ಜೋಡುಕಟ್ಟೆ ಸಮಿತಿ ವತಿಯಿಂದ ಶ್ರೀ ಕೃಷ್ಣ ದೇವರಿಗೆ ವಿಶೇಷ ಪ್ರಾರ್ಥನೆ ಮೂಲಕ ತೆಂಗಿನಕಾರಿ ಒಡೆದು ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮೆರವಣೆಗೆಯಲ್ಲಿ ಚೆಂಡೆ ವಾದನ, ಜಿಲಾ ಸಮಿತಿಗಳಿಂದ ವಿವಿಧ ಬಗೆಯ ಗಣಪತಿ , ಶ್ರೀ ಕೃಷ್ಣ , ಶ್ರೀ ನಾರಾಯಣ ಗುರು, ಭಾರತ ಮಾತೆ ,ಕರ್ನಾಟಕ ಮಾತೆ, ಶ್ರೀ ಲಕ್ಷ್ಮೀ ದೇವಿ, ಜೈ ಹನುಮಾನ್ , ಶ್ರೀ ವೆಂಕಟರಮಣ , ಶ್ರೀ ಮಹಾವೀರ, ಜೋಗದ ವೈಭವ, ಮಹಾಕಾಳಿ, ಯಕ್ಷಗಾನ ,ರಜತ ರಥ ಸುಮಾರು 20 ಕ್ಕೂ ಹೆಚ್ಚಿನ ಬಗೆಯ ಟ್ಯಾಬ್ಲೋ ಗಳು ಮೆರವಣಿಗೆಯಲ್ಲಿ ಹೊರಟು ಉಡುಪಿ ಮುಖ್ಯ ರಸ್ತೆಯ ಕೋರ್ಟ್ ರೋಡ್ ,ಹಳೆ ಡಯಾನಾ ಸರ್ಕಲ್ , ನಗರ ಸಭೆ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಕಲ್ಸಂಕ , ಕಡಿಯಾಳಿ , ಶಾರದಾ ಮಂಟಪ , ಮಾರ್ಗವಾಗಿ ಬೀಡಿನ ಗುಡ್ಡೆಗೆ ಬಂದು ತಲುಪಿತು.

ಉಡುಪಿ ಜಿಲ್ಲಾ ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಿವರಾಜ್ ಮಲ್ಲಾರ್, ರಾಜ್ಯ ಅಧ್ಯಕ್ಷ ಶಿವ ಕುಮಾರ್ ಹಿರೇಮಠ, ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್, ಪ್ರಧಾನ ಕಾರ್ಯದರ್ಶಿ ದಾಮೋದರ್ , ಜಿಲ್ಲಾ ಶಾಮಿಯಾನ ಅಧ್ಯಕ್ಷ ಉದಯಕುಮಾರ್, ವಿವಿಧ ರಾಜ್ಯ ಸಮಿತಿ ಸದಸ್ಯರು ಹಾಗೂ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಪಾಲ್ಗೊಂಡಿದ್ದರು.