ಉಡುಪಿ‌ ಜಿಲ್ಲೆ: ಅತಿಥಿ ಉಪನ್ಯಾಸಕರ ವೇತನ ವಿತರಣೆಯಲ್ಲಿ ಪ್ರಾಂಶುಪಾಲರ ತಾರತಮ್ಯ!:ಆರೋಪ

ಉಡುಪಿ-ಕಾರ್ಕಳ: ಪದವಿ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಡಿ ನೇಮಕರಾದ ಅತಿಥಿ ಉಪನ್ಯಾಸಕರಿಗೆ ಈಗಾಗಲೇ ಸರಕಾರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅನುದಾನ ಬಿಡುಗಡೆ ಮಾಡಿದ್ದು ಅತಿಥಿ ಉಪನ್ಯಾಸಕರಿಗೆ ವಿತರಿಸುವಂತೆ ಪ್ರಕಟಣೆ ಹೊರಡಿಸಿದೆ. ಆದರೆ ಉಡುಪಿ ಜಿಲ್ಲೆಯ ಕೆಲವು ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರು ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡದೇ ಸತಾಯಿಸುತ್ತಿದ್ದಾರೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಪರೀಕ್ಷಾ ಕರ್ತವ್ಯ ಮಾಡಿಲ್ಲ ಎಂದು ಕರ್ತವ್ಯ ನಿರ್ವಹಿಸದ ಅತಿಥಿ ಉಪನ್ಯಾಸಕರನ್ನು ‌ನಿಂದಿಸುತ್ತಾ  ಪರೀಕ್ಷಾ ಕರ್ತವ್ಯ ನಿರ್ವಹಿಸದ ತಮಗೆ ಬೇಕಾದ ಅತಿಥಿ ಉಪನ್ಯಾಸಕರ ಸಹಿಯನ್ನು ಅಕ್ಟೋಬರ್ ತಿಂಗಳಲ್ಲಿ ಪಡೆದುಕೊಂಡು ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎನ್ನುವಂತೆ ಬಿಂಬಿಸಿ ಅವರಿಗೆ ವೇತನ ಪಾವತಿಸಿದ ಕುರಿತು ಮಾಹಿತಿ ಲಭ್ಯವಾಗಿದೆ.ಕೆಲವು ಉಪನ್ಯಾಸಕರಿಗೆ ನೀವು ಸಹಿ ಹಾಕಬೇಡಿ ಎಂದು ದೂರವಿರಿಸಿ ಅವರಿಗೆ ವೇತನ ಪಾವತಿ ಮಾಡದೇ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.ಈ‌ ಬಾಕಿ  ವೇತನವನ್ನು ಪ್ರಾಂಶುಪಾಲರು ಮತ್ತು ಕಾಲೇಜುಗಳ‌ ಕಾರ್ಯಾಲಯ ಮುಖ್ಯಸ್ಥರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇದೆ ಎನ್ನುವ ಅನುಮಾನವೂ ವ್ಯಕ್ತವಾಗಿದೆ.

ಸರಕಾರ ಅನುದಾನ ಬಿಡುಗಡೆಗೊಳಿಸಿದ್ದರೂ ದೇವರು ಕೊಟ್ಟರೂ ಪೂಜಾರಿ ಬಿಡ ಎನ್ನುವಂತೆ ತಮ್ಮ ಮನಸ್ಸಿಗೆ ಬಂದಂತೆ ತಮಗೆ ನಿಷ್ಠರಾಗಿರುವ,ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗದಿದ್ದರೂ ತಮಗೆ ಬೇಕಾದ ಅತಿಥಿ ಉಪನ್ಯಾಸಕರ ಸಹಿಯನ್ನು ಹಾಕಿಸಿಕೊಂಡು‌ ಹಂಚಿಕೆ ಮಾಡಿದ್ದಾರೆ.ಉಳಿದ ಅತಿಥಿ ಉಪನ್ಯಾಸಕರಿಗೆ ಸಪ್ಟೆಂಬರ್ ತಿಂಗಳ‌ ಸಹಿ ಹಾಕದೇ ಖಾಲಿ ಬಿಡುವಂತೆ ಹೇಳಿ ಅನ್ಯಾಯ ಮಾಡಲಾಗಿದೆ ಎಂದು ಅತಿಥಿ ಉಡುಪಿ ಜಿಲ್ಲೆಯ ಕಾಲೇಜಿನ ಹೆಸರು ಹೇಳಲಿಚ್ಚಿಸದ  ಅತಿಥಿ ಉಪನ್ಯಾಸಕರಾದ ಆರ್.ವಿ. ಶರ್ಮ ದೂರಿದ್ದಾರೆ.

ಕಾರ್ಕಳ ತಾಲೂಕಿನ ಸರಕಾರಿ ಪದವಿ ಕಾಲೇಜೊಂದರಲ್ಲಿ ಪ್ರಾಂಶುಪಾಲನ್ನೊಬ್ಬ ಅತಿಥಿ ಉಪನ್ಯಾಸಕರಿಗೆ “ಅತಿಥಿ ಉಪನ್ಯಾಸಕರ ಬಗ್ಗೆ ನನಗೆ ಕನಿಕರವಿಲ್ಲ,ಎಂದು ಅಮಾನವೀಯವಾಗಿ ಮಾತಾಡಿದ್ದಾರೆ.ಆ ಪ್ರಾಂಶುಪಾಲನ ನಡೆ ನುಡಿ ಕುರಿತು ನಮಗೆ ಮಾಹಿತಿ ಸಿಕ್ಕಿದೆ.ಲಕ್ಷಗಟ್ಟಲೇ ಸಂಬಳ ಪಡೆವ ಇಂತಹ ವ್ಯಕ್ತಿಗಳಿಗೆ  ಕಾಲೇಜು ಕಾರ್ಯಾಲಯದ ಮ್ಯಾನೇಜರುಗಳು ಸಾಥ್ ನೀಡುತ್ತಿದ್ದು ಅತಿಥಿ ಉಪನ್ಯಾಸಕರ ವಿರುದ್ಧ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ.ಈ‌ ಕುರಿತು ವಿವಿಧ ಉಪನ್ಯಾಸಕರಿಂದ ಮಾಹಿತಿ ಕಲೆ ಹಾಕುತ್ತಿದ್ದು ಮುಂದಿನ ನಮ್ಮ ನಡೆಯನ್ನು ಕೈಗೊಳ್ಳುತ್ತೇವೆ.‌ನಮ್ಮ ಕೈಗೆ ಬರುವ ಸಂಬಳ ಕಿತ್ತುಕೊಳ್ಳುವ ಪ್ರಾಂಶುಪಾಲರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂದು‌ನಿರ್ಧರಿಸುತ್ತೇವೆ” ಎಂದು ಶರ್ಮ ಅವರು ತಿಳಿಸಿದ್ದಾರೆ.

ಲಕ್ಷಗಟ್ಟಲೇ ಸಂಬಳ ಪಡೆದು ಕಷ್ಟವೆನೆಂದರೆ ಗೊತ್ತಿಲ್ಲದ ಪ್ರಾಂಶುಪಾಲರಿಗೆ, ಪ್ರಾಮಾಣಿಕತೆಯಿಂದ ಬದುಕುತ್ತಿರುವ ಅತಿಥಿ ಉಪನ್ಯಾಸಕರ ಕಷ್ಟಗಳು ಅರ್ಥವಾಗದೆ ಇರುವುದು,ತಾವು ಮಾತ್ರ ಶ್ರೇಷ್ಠರು ಅ.ಉಪನ್ಯಾಸಕರು ನಿಕೃಷ್ಟರು ಎನ್ನುವ ಅಹಂ ತಲೆಗೆ ಏರಿರುವುದು ನಮ್ಮ ವ್ಯವಸ್ಥೆಯ ದುರವಸ್ಥೆಯೇ ಸರಿ.