ತ್ವರಿತ ಸಂದೇಶ ಸೇವೆ ಟೆಲಿಗ್ರಾಮ್ನ ಸಂಸ್ಥಾಪಕ ಪಾವೆಲ್ ಡುರೊವ್ ತಮ್ಮ ಟೆಲಿಗ್ರಾಮ್ ಚಾನೆಲ್ನಲ್ಲಿ ಮಾತನಾಡಿ,13 ವರ್ಷಗಳಿಂದ ಕಣ್ಗಾವಲು ಸಾಧನವಾಗಿರುವ ವಾಟ್ಸಾಪ್ ನಿಂದ ದೂರವಿರಬೇಕು ಎಂದು ಹೇಳಿದ್ದಾರೆ. ಪ್ರತಿ ವರ್ಷ ವಾಟ್ಸಾಪ್ನಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ಅದು ತನ್ನ ಬಳಕೆದಾರರ ಡೇಟಾವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ಇಲ್ಲಿ ಟೆಲಿಗ್ರಾಮ್ ಉಪಯೋಗಿಸಲು ಜನರನ್ನು ಒತ್ತಾಯಿಸುತ್ತಿಲ್ಲ. 700ಮಿ+ ಸಕ್ರಿಯ ಬಳಕೆದಾರರು ಮತ್ತು 2ಮಿ+ ದೈನಂದಿನ ಸೈನ್ಅಪ್ಗಳೊಂದಿಗೆ, ಟೆಲಿಗ್ರಾಮ್ಗೆ ಹೆಚ್ಚುವರಿ ಪ್ರಚಾರದ ಅಗತ್ಯವಿಲ್ಲ. ನೀವು ಇಷ್ಟಪಡುವ ಯಾವುದೇ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ನೀವು ಬಳಸಬಹುದು, ಆದರೆ ವಾಟ್ಸಾಪ್ ನಿಂದ ದೂರವಿರಿ. ಇದು ಕಳೆದ 13 ವರ್ಷಗಳಿಂದ ಕಣ್ಗಾವಲು ಸಾಧನದಂತೆ ಕೆಲಸ ಮಾಡುತ್ತಿದೆ. ಕಳೆದ ವಾರ ಈ ಪ್ಲಾಟ್ಫಾರ್ಮ್ ಭದ್ರತಾ ಸಮಸ್ಯೆಯೊಂದನ್ನು ಪತ್ತೆ ಹಚ್ಚಿದ್ದು, ಈ ವೈಫಲ್ಯದಿಂದ ಹ್ಯಾಕರ್ಗಳು ವಾಟ್ಸಾಪ್ ಬಳಕೆದಾರರ ಫೋನ್ಗಳಲ್ಲಿನ ಎಲ್ಲದಕ್ಕೂ ಸಂಪೂರ್ಣ ಪ್ರವೇಶವನ್ನು ಹೊಂದಬಹುದು. ಒಬ್ಬರ ಫೋನ್ನಲ್ಲಿರುವ ಎಲ್ಲಾ ಡೇಟಾಗಳಿಗೆ ಪ್ರವೇಶ ಪಡೆಯಲು ದುರುದ್ದೇಶಪೂರಿತ ವೀಡಿಯೊ ಕಳುಹಿಸಿದರೆ ಅಥವಾ ವೀಡಿಯೊ ಕರೆ ಮಾಡಿದರೆ ಸಾಕು ಎಂದು ಅವರು ಹೇಳಿದ್ದಾರೆ.
ವಾಟ್ಸಾಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡುವುದರಿಂದ ತನ್ನ ಡೇಟಾ ಸುರಕ್ಷಿತವಾಗಿರುತ್ತದೆ ಎಂದು ಯಾರಾದರೂ ಭಾವಿಸಿದರೆ, ಅದು ನಿಜವಲ್ಲ. 2017, 2018, 2019 ರಲ್ಲಿ ಕಂಡುಬಂದ ಸಮಸ್ಯೆ ನಂತರ 2020 ರಲ್ಲಿಯೂ ಕಂಡುಬಂದಿದೆ. 2016 ರ ಮೊದಲು, ವಾಟ್ಸಾಪ್ ಗೆ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಇರಲಿಲ್ಲ. ಪ್ರತಿ ವರ್ಷವೂ ವಾಟ್ಸಾಪ್ ನಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ನಾವು ತಿಳಿಯುತ್ತೇವೆ ಮತ್ತದು ಅದರ ಬಳಕೆದಾರರ ಸಾಧನಗಳಲ್ಲಿನ ಎಲ್ಲ ಮಾಹಿತಿಯನ್ನೂ ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಮನಗಾಣುತ್ತೇವೆ. ಅಂದರೆ ಹೊಸ ಭದ್ರತಾ ದೋಷವು ಈಗಾಗಲೇ ಅಸ್ತಿತ್ವದಲ್ಲಿದೆ ಎಂಬುದು ಬಹುತೇಕ ಖಚಿತವಾಗುತ್ತದೆ. ಅಂತಹ ಸಮಸ್ಯೆಗಳು ಪ್ರಾಸಂಗಿಕವಲ್ಲ ಬದಲಿಗೆ ಅವುಗಳನ್ನು ಹಿಂಬಾಗಿಲ ಮೂಲಕ ಉದೇಶಪೂರ್ವಕವಾಗಿ ಮಾಡಲಾಗುತ್ತದೆ. ಒಂದು ಹಿಂಬಾಗಿಲನ್ನು ಪತ್ತೆಮಾಡಿ ತೆಗೆದುಹಾಕಿದರೆ, ಮತ್ತೊಂದನ್ನು ಸೇರಿಸಲಾಗುತ್ತದೆ.
ಸೆಪ್ಟೆಂಬರ್ನಲ್ಲಿ ವಾಟ್ಸಾಪ್ ಭದ್ರತಾ ಸಲಹೆಯನ್ನು ನೀಡಿದ ನಂತರ ಈ ಹೇಳಿಕೆಯನ್ನು ಡುರೋವ್ ನೀಡಿದ್ದಾರೆ. ವೀಡಿಯೊ ಕರೆಯಲ್ಲಿರುವಾಗ ಒಬ್ಬರ ಸಾಧನದಲ್ಲಿ ಮಾಲ್ವೇರ್ ಅನ್ನು ಹಾಕಲು ಹ್ಯಾಕರ್ಗೆ ಅನುಮತಿಸುವ ದುರ್ಬಲತೆಗೆ ವಾಟ್ಸಾಪ್ ಪರಿಹಾರವನ್ನು ಬಿಡುಗಡೆ ಮಾಡಿದೆ. ಈ ಭದ್ರತಾ ಲೋಪವನ್ನು ‘ನಿರ್ಣಾಯಕ’ ಎಂದು ರೇಟ್ ಮಾಡಲಾಗಿದೆ. ಈ ಲೋಪವು ದುರುದ್ದೇಶಪೂರಿತ ವೀಡಿಯೊ ಫೈಲ್ ಅನ್ನು ಬಳಕೆದಾರರ ಫೋನ್ ನಲ್ಲಿ ತುರುಕಲು ಅನುವು ಮಾಡಿಕೊಡುತ್ತದೆ.
ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ ಪರವಾಗಿಲ್ಲ, ಅವರು ತಮ್ಮ ಫೋನ್ನಲ್ಲಿ ವಾಟ್ಸಾಪ್ ಹೊಂದಿದ್ದರೆ, ಅವರ ಸಾಧನದಲ್ಲಿನ ಎಲ್ಲಾ ಡೇಟಾಗೆ ಪ್ರವೇಶಿಸಬಹುದು. ಅದಕ್ಕಾಗಿಯೇ ನಾನು ವರ್ಷಗಳ ಹಿಂದೆ ನನ್ನ ಸಾಧನಗಳಿಂದ ವಾಟ್ಸಾಪ್ ಅನ್ನು ಅಳಿಸಿದ್ದೇನೆ. ಇದನ್ನು ಇನ್ಸ್ಟಾಲ್ ಮಾಡುವುದರಿಂದ ನಿಮ್ಮ ಫೋನ್ಗೆ ಪ್ರವೇಶಿಸಲು ಒಂದು ಬಾಗಿಲನ್ನು ಸೃಷ್ಟಿಸಿದಂತಾಗುತ್ತದೆ ಎಂದು ಡುರೋವ್ ಎಚ್ಚರಿಸಿದ್ದಾರೆ.
ಮೂಲ: ಬಿಸಿನೆಸ್ ಟುಡೇ.ಇನ್