ವಾಹನ ಸಂಬಂಧಿತ ಕೆಲಸಗಳಿಗೆ ವಾಹನ-4 ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆಗೆ ಆರ್.ಟಿ.ಒ ಸೂಚನೆ

ಉಡುಪಿ: ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ವಾಹನ ಮಾರಾಟ, ವಾಹನದದ ಕಂತು ಕರಾರು ನಮೂದು, ಕಂತು ಕರಾರು ರದ್ಧತಿ, ವಿಳಾಸ ಬದಲಾವಣೆ, ತೆರಿಗೆ ತೀರುವಳಿ ಪತ್ರ, ವಾಹನದ ನೋಂದಣಿ ನವೀಕರಣ ಹಾಗೂ ವಾಹನಕ್ಕೆ ಸಂಬಂಧಿಸಿದ ಇನ್ನಿತರ ಯಾವುದೇ ಕೆಲಸಗಳಿಗೆ ಅರ್ಜಿ ಸಲ್ಲಿಸುವಾಗ ಅರ್ಜಿ ನಮೂನೆ ಹಾಗೂ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ವಾಹನ-4 ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿ ಸಲ್ಲಿಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿಗಳ ಪ್ರಕಟಣೆ ತಿಳಿಸಿದೆ.