ದುಬೈ: ದಸರಾದಂದು ಸಾರ್ವಜನಿಕರಿಗೆ ಮುಕ್ತವಾದ ಭವ್ಯ ಹಿಂದೂ ದೇವಾಲಯ

ದುಬೈ: ಇಲ್ಲಿನ ‘ಪೂಜಾ ಗ್ರಾಮ’ ಜೆಬೆಲ್ ಅಲಿ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಉದ್ಘಾಟನೆಗೊಂಡ ಭವ್ಯವಾದ ಹಿಂದೂ ದೇವಾಲಯವು ದಸರಾ ಸಂದರ್ಭದಲ್ಲಿ ಭಕ್ತರಿಗೆ ಮುಕ್ತವಾಗಿದೆ. ಈ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆಯಾಗಿದೆ.

Image

ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ನೆಲಮಹಡಿಯಲ್ಲಿರುವ ದೇವಾಲಯದ ವಿವಿಧೋದ್ದೇಶ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ದೇವಾಲಯವನ್ನು ಉದ್ಘಾಟಿಸಿದರು.

ಮುಖ್ಯ ಪ್ರಾರ್ಥನಾ ಮಂದಿರದಲ್ಲಿ ರಿಬ್ಬನ್ ಕತ್ತರಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಯುಎಇಯ ಭಾರತೀಯ ರಾಯಭಾರಿ ಮತ್ತು ಹಲವಾರು ಉನ್ನತ ಮಟ್ಟದ ಸಿಡಿಎ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

Dubai temple inauguration

ದುಬೈನಲ್ಲಿ ಬಹು-ಧರ್ಮದ ಸಂಕೀರ್ಣದಲ್ಲಿರುವ ಈ ದೇವಾಲಯದಲ್ಲಿ 16 ಹಿಂದೂ ದೇವತೆಗಳು ಮತ್ತು ಗುರು ಗ್ರಂಥ ಸಾಹಿಬ್ ಅನ್ನು ಹೊಂದಿದೆ. ಪ್ರತಿನಿತ್ಯ ಸುಮಾರು 1,000 ರಿಂದ 1,200 ಭಕ್ತರಿಗೆ ಸುಲಭವಾಗಿ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುವ ದೇವಾಲಯವು ಮೊದಲ ದಿನದಂದೆ ಭಾರಿ ಜನಸಂದಣಿಯನ್ನು ಕಂಡಿದೆ. 80,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ದೇವಾಲಯವು ಗುರು ಗ್ರಂಥ ಸಾಹಿಬ್ ಜೊತೆಗೆ ಶಿವ, ಕೃಷ್ಣ, ಗಣೇಶ ಮತ್ತು ಮಹಾಲಕ್ಷ್ಮಿ ಸೇರಿದಂತೆ 16 ದೇವತೆಗಳನ್ನು ಹೊಂದಿದೆ.

Imageಹೊಸ ಹಿಂದೂ ದೇವಾಲಯವು ಬೆಳಿಗ್ಗೆ 6:30 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ. ದೇವಸ್ಥಾನಕ್ಕೆ ಭೇಟಿ ನೀಡಲು, ಸಾರ್ವಜನಿಕರು ಅದರ ವೆಬ್‌ಸೈಟ್‌ನಲ್ಲಿ ಕ್ಯೂಆರ್-ಕೋಡ್ ಆಧಾರಿತ ಅಪಾಯಿಂಟ್‌ಮೆಂಟ್ ಬುಕಿಂಗ್ ವ್ಯವಸ್ಥೆಯ ಮೂಲಕ ತಮ್ಮ ಸ್ಲಾಟ್ ಅನ್ನು ಬುಕ್ ಮಾಡಬಹುದು. ಜನಸಂದಣಿ ನಿರ್ವಹಣೆಗಾಗಿ ಮತ್ತು ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ನಿರ್ಬಂಧಿತ ಪ್ರವೇಶವನ್ನು ನಿಯಂತ್ರಿಸಲಾಗಿದೆ.