ಬಂಟ್ವಾಳ: ತಾಲೂಕಿನಲ್ಲಿ ಕಂಡು ಬಂದ ಪಿಎಫ್ ಐ ರಸ್ತೆ ಬರಹ ಒಂದು ಎಚ್ಚರಿಕೆಯಾಗಿದ್ದು ಪಿಎಫ್ಐ ಇನ್ನೂ ಸಕ್ರಿಯವಾಗಿದೆ ಎಂಬುದರ ಸಂಕೇತ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಉಡುಪಿಯಲ್ಲಿ ಬುಧವಾರ ಮಾತನಾಡಿದ ಪ್ರಮೋದ್ ಮುತಾಲಿಕ್, ಪಿಎಫ್ಐ ಬ್ಯಾನ್ ಅಥವಾ ಬಂಧನದಿಂದ ಅವರ ಆಟ ಮುಗಿಯುವುದಿಲ್ಲ, ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ಹೇಳಿದ್ದಾರೆ.
ಪಿಎಫ್ಐನ ಸಾವಿರಾರು ಕಾರ್ಯಕರ್ತರು ಇನ್ನೂ ಸಕ್ರಿಯವಾಗಿ ಇದ್ದಾರೆ ಎಂದು ಹೇಳಿರುವ ಮುತಾಲಿಕ್, ಕುತಂತ್ರ, ಷಡ್ಯಂತ್ರ, ದೇಶದ್ರೋಹಿ ಪ್ರವೃತ್ತಿಯನ್ನು ಬ್ಯಾನ್ ನಿಂದ ತಡೆಯಲು ಸಾಧ್ಯವಿಲ್ಲ. ಪಿಎಫ್ಐ ಪುಂಡಾಟಿಕೆಯ ಕಡಿವಾಣಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು ಎಂದು ಹೇಳಿದ್ದಾರೆ.
ಪಿಎಫ್ ಐ ಸಂಘಟನೆಯನ್ನು ನಿಷೇಧಿಸಿದ ಬಳಿಕವೂ ಚಡ್ಡಿಗಳೇ ನಾವು ಮತ್ತೆ ಬರುತ್ತೇವೆ ಎಂಬ ಬರಹ ಬಂಟ್ವಾಳ ತಾಲೂಕಿನಲ್ಲಿ ಕಾಣಿಸಿಕೊಂಡಿತ್ತು.












