ಶ್ರೀರಾಮನ ಪಾತ್ರದಲ್ಲಿ ಬಾಹುಬಲಿ ಪ್ರಭಾಸ್: ಆದಿಪುರುಷ್ ಟೀಸರ್ ಬಿಡುಗಡೆ

ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಆದಿಪುರುಷ ಚಿತ್ರದ ಬಹು ನಿರೀಕ್ಷಿತ ಟೀಸರ್ ನಿನ್ನೆ ಅಯೋಧ್ಯೆಯಲ್ಲಿ ಭಾರೀ ಸಡಗರದಿಂದ ಬಿಡುಗಡೆಯಾಗಿದೆ. ಆದಿಪುರುಷ್ ಚಿತ್ರವು ರಾಮಾಯಣವನ್ನು ಆಧರಿಸಿದ್ದು, ಇದರಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಕಾಣಿಸಿಕೊಂಡಿದ್ದು, ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಭಾಸ್, ಕೃತಿ ಸನೋನ್, ಚಿತ್ರದ ನಿರ್ದೇಶಕ ಓಮ್ ರೌತ್ ಮತ್ತು ನಿರ್ಮಾಪಕ ಭೂಷಣ್ ಕುಮಾರ್ ಚಿತ್ರ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಮುಂದಿನ ವರ್ಷ ಜನವರಿ 12 ರಂದು ಚಿತ್ರವು ತೆರೆಕಾಣಲಿದೆ.