ಕಾರ್ಕಳ: ಆರ್ಕಿಟೆಕ್ಚರ್ ಕ್ಷೇತ್ರ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನಡೆದ ನಾಟಾ ಪರೀಕ್ಷೆಯ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು, ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಾದ ಭೂಮಿಕಾ ಎಸ್ ಜಿ ರಾಜ್ಯಕ್ಕೆ 88 ನೇ ರ್ಯಾಂಕ್, ಚಂದು ಪಿ ಎನ್ 116 ನೇ ರ್ಯಾಂಕ್, ಅಂಕಿತ್ 118 ನೇ ರ್ಯಾಂಕ್, ಅನ್ವಿನ್ ಬಿ ಪಿ 125 ನೇ ರ್ಯಾಂಕ್, ಲಹರಿ 161 ನೇ ರ್ಯಾಂಕ್, ಚಿನ್ಮಯ ಹವಲಗೋಳ್ 184 ನೇ ರ್ಯಾಂಕ್, ಮನೀಷ್ 226 ನೇ ರ್ಯಾಂಕ್, ಆಕಾಶ್ ಹೆಚ್ ಸಿ 451 ನೇ ರ್ಯಾಂಕ್, ಹರ್ಷಿತಾ 462 ನೇ ರ್ಯಾಂಕ್, ಕವನಶ್ರೀ 671 ನೇ ರ್ಯಾಂಕ್, ಕರ್ಣಿಕಾ 744 ನೇ ರ್ಯಾಂಕ್, ಪ್ರತೀಕ್ ಕುಮಾರ್ 825 ನೇ ರ್ಯಾಂಕ್ ಗಳಿಸಿದ್ದಾರೆ.
ಇದರ ಜೊತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆಗೊಳಿಸಿದ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯಲ್ಲಿ ಉಪಾಸನ ಬಿ ಪಿ ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 47 ನೇ ರ್ಯಾಂಕ್, ಮಧುಶ್ರೀ 80 ನೇ ರ್ಯಾಂಕ್, ರಾಘವೇಂದ್ರ ತಾಳಿಕೋಟಿ ವೆಟರ್ನರಿ ವಿಭಾಗದಲ್ಲಿ ರಾಜ್ಯಕ್ಕೆ 110 ನೇ ರ್ಯಾಂಕ್ ಹಾಗೂ ಬಿಎನ್ವೈಎಸ್ನಲ್ಲಿ ಸಾತ್ವಿಕ್ ಶ್ರೀಕಾಂತ್ ಹೆಗಡೆ 167 ನೇ ರ್ಯಾಂಕ್ ಗಳಿಸುವ ಜೊತೆಗೆ ಕಾಲೇಜಿನ ಒಟ್ಟು 32 ವಿದ್ಯಾರ್ಥಿಗಳು 1000 ಒಳಗಿನ ರ್ಯಾಂಕ್ ಗಳಿಸಿದ್ದಾರೆ. ಕಾಲೇಜು ತನ್ನ ಪ್ರಥಮ ಪ್ರಯತ್ನದಲ್ಲೇ ಶೇಕಡಾ 100 ಫಲಿತಾಂಶ ಗಳಿಸುವುದರೊಂದಿಗೆ ನೀಟ್ ಪರೀಕ್ಷೆಯಲ್ಲೂ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪಿಆರ್ಓ ಲಿಶನ್ ಗೌಡ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.