ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪಾಲಿಯೆಟಿವ್ ಔಷಧ ವಿಭಾಗದ ಸಹಯೋಗದೊಂದಿಗೆ ನರ್ಸಿಂಗ್ ಸೇವೆಗಳ ವಿಭಾಗವು ಡಾ. ಟಿಎಂಎ ಪೈ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 28 ರಿಂದ 30 ರ ವರೆಗೆ ದಾದಿಯರಿಗಾಗಿ ಎಂಡ್ ಆಫ್ ಲೈಫ್ ನರ್ಸಿಂಗ್ ಎಜುಕೇಶನ್ ಕನ್ಸೋರ್ಷಿಯಂ, ಎಲ್ ನೆಕ್/ ಪಾಲಿಯೆಟಿವ್ ಆರೈಕೆ ಕೋರ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಮಿಸ್ ಹನಿಫೆ ಮೆಕ್ ಗಾಮ್ ವೆಲ್, ಆರ್ ಎನ್, ಎಂ ಎಸ್ ಎನ್ , ಎಂ ಟಿ ಸಿ ಎಂ , ಪಿ ಎಚ್ ಎನ್ , ಭಾರತದಲ್ಲಿನ ಎಲ್ ನೆಕ್ ಯು ಎಸ್ ಎ ಗೌರವ ಮುಖ್ಯಸ್ಥರು ಹಾಗೂ ತರಬೇತುದಾರರರು ಮತ್ತು ಅವರ ತಂಡಭಾಗವಹಿಸಿತ್ತು.
2000 ನೇ ಇಸವಿಯಲ್ಲಿ ಪ್ರಾರಂಭವಾದ ಎಲ್ ನೆಕ್ / ಪಾಲಿಯೆಟಿವ್ ಆರೈಕೆ ಮಾಡ್ಯೂಲ್‌ಗಳನ್ನು ಅಮೇರಿಕನ್ ಅಸೋಸಿಯೇಷನ್ ಆಫ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಹೋಪ್ ಸಿಟಿ, ಮೆಡಿಕಲ್ ಸೆಂಟರ್, ಯು ಎಸ್ ಎ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಭಾರತ ಮತ್ತು ಏಷ್ಯಾದ ಇತರ ದೇಶಗಳಲ್ಲಿ ಅಳವಡಿಸಲಾಗಿದೆ.
ಭಾರತದಲ್ಲಿ ಎಲ್ ನೆಕ್ ತರಬೇತಿಯನ್ನು ಪುಣೆಯಲ್ಲಿರುವ ಸಿಪ್ಲಾ ಹಾಸ್ಪೈಸ್ ಮತ್ತು ತರಬೇತಿ ಕೇಂದ್ರದ ಸಹಕಾರದೊಂದಿಗೆ ನಡೆಸಲಾಗುತ್ತಿದೆ. ಎಲ್ ನೆಕ್ ಯೋಜನೆಯು ದಾದಿಯರು ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಗುಣಮಟ್ಟದ ಪಾಲಿಯೆಟಿವ್ ಆರೈಕೆಯನ್ನು ಒದಗಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುತ್ತದೆ. ಅಲ್ಲಿ ದಾದಿಯರು ಮತ್ತು ವೈದ್ಯರು ತಮ್ಮ ಜೀವನದಲ್ಲಿ ಧನಾತ್ಮಕ ಪರಿಣಾಮಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಾರೆ. ಜೊತೆಗೆ ತೀವ್ರ ಅನಾರೋಗ್ಯ ಮತ್ತು/ಅಥವಾ ಸಾವನ್ನು ಎದುರಿಸುತ್ತಿರುವ ರೋಗಿಗಳು ಮತ್ತು ಕುಟುಂಬಗಳ ಜೀವನದಲ್ಲಿಯೂ ಧನಾತ್ಮಕವಾಗಿ ಪರಿಣಾಮ ಬೀರುತ್ತಾರೆ.
ಎಂಡ್ ಆಫ್ ಲೈಫ್ ನರ್ಸಿಂಗ್ ಎಜುಕೇಶನ್ ಕನ್ಸೋರ್ಷಿಯಂ ಅನ್ನು ಮುಖ್ಯ ಅತಿಥಿಗಳಾದ ಕೆಎಂಸಿ ಮಣಿಪಾಲದ ಡೀನ್ ಡಾ.ಶರತ್ ಕುಮಾರ್ ರಾವ್ ಉದ್ಘಾಟಿಸಿದರು. ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದರು . ಪಾಲಿಯೆಟಿವ್ ಔಷಧ ಮತ್ತು ಸಪೋರ್ಟಿವ್ ಕೇರ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ನವೀನ್ ಸಾಲಿನ್ಸ್ ಎಲ್ ನೆಕ್ ಕಾರ್ಯಕ್ರಮದ ಬಗ್ಗೆ ಅವಲೋಕನ ಮಾಡಿದರು.
ನರ್ಸಿಂಗ್ ಸೇವಾ ವಿಭಾಗದ ಮುಖ್ಯಸ್ಥೆ ಡಾ.ಪಿ.ಸುಬಾ ಸೂರಿಯಾ ಸ್ವಾಗತಿಸಿದರು. ನರ್ಸಿಂಗ್ ತರಬೇತಿ ಮತ್ತು ಗುಣಮಟ್ಟ ವಿಭಾಗದ ಉಸ್ತುವಾರಿ ಶ್ರೀಮತಿ ಶರ್ಮಿನ್ ಕ್ರಿಸ್ಟಲ್ ಸಾಲಿನ್ಸ್ ವಂದಿಸಿದರು. ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಸೇವಾ ಪೂರೈಕೆದಾರರು ಸೇರಿದಂತೆ 200 ಕ್ಕೂ ಹೆಚ್ಚು ಆರೋಗ್ಯ ವೃತ್ತಿಪರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.