ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ನಂತರ, ಫಹದ್ ಫಾಸಿಲ್ ನಾಯಕರಾಗಿ ‘ಧೂಮಮ್’ ಎಂಬ ಹೊಸ ಚಲನಚಿತ್ರವನ್ನು ನಿರ್ಮಿಸುವ ಬಗ್ಗೆ ಹೊಂಬಾಳೆ ಫಿಲಂಸ್ ಟ್ವಿಟರ್ ನಲ್ಲಿ ಘೋಷಿಸಿದೆ. ಹೊಂಬಾಳೆ ಫಿಲಂಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧೂಮಮ್ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರವನ್ನು ಈ ಹಿಂದೆ ಲೂಸಿಯಾ ಮತ್ತು ಯು-ಟರ್ನ್ ಚಿತ್ರಗಳನ್ನು ಬರೆದು, ನಿರ್ದೇಶಿಸಿದ್ದ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಧೂಮಮ್ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣಾ ಬಾಲಮುರಳಿ ನಾಯಕಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಅಕ್ಟೋಬರ್ 9 ರಂದು ಪ್ರಾರಂಭವಾಗಲಿದ್ದು, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು 4 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
𝐖𝐡𝐚𝐭 𝐲𝐨𝐮 𝐬𝐨𝐰, 𝐬𝐨 𝐬𝐡𝐚𝐥𝐥 𝐲𝐨𝐮 𝐫𝐞𝐚𝐩.
Presenting #Dhoomam.Kickstarting from Oct 9, 2022, End Game begins in Summer 2023.@twitfahadh #Pawan @VKiragandur @aparnabala2@hombalefilms @HombaleGroup @vjsub @Poornac38242912 #PreethaJayaraman @roshanmathew22 pic.twitter.com/5x9zXJsznj
— Hombale Films (@hombalefilms) September 30, 2022
ಮೂಲಗಳ ಪ್ರಕಾರ, ಧೂಮಮ್ ಚಿತ್ರದ ಪರಿಮಾಣ ಮತ್ತು ವ್ಯಾಪ್ತಿ ದೊಡ್ಡದಾಗಿರುತ್ತದೆ. ಈ ಚಿತ್ರವು ಘಟಾನುಘಟಿ ನಟರು ಮತ್ತು ತಂತ್ರಜ್ಞರನ್ನು ಒಳಗೊಂಡಿರುತ್ತದೆ ಮತ್ತು ಅದರ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ ಎನ್ನಲಾಗಿದೆ.
ಫಸ್ಟ್ ಲುಕ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ನಿರ್ಮಾಪಕ ವಿಜಯ್ ಕಿರಗಂದೂರು, ‘ಧೂಮಮ್ ಹೊಸ ಪರಿಕಲ್ಪನೆಯನ್ನು ಆಧರಿಸಿದೆ. ಮತ್ತು ನಾವು ಹೊಸ ಮತ್ತು ಬೃಹತ್ ಪಾತ್ರದಲ್ಲಿ ಫಹಾದ್ ಅವರನ್ನು ನೋಡಲಿದ್ದೇವೆ. ದೊಡ್ಡ ನಟರ ಸಮ್ಮಿಲನವು ಮಾಯಾಜಾಲವನ್ನು ರಚಿಸಬಹುದು ಎಂದು ನಾವು ಖಂಡಿತವಾಗಿಯೂ ಭಾವಿಸುತ್ತೇವೆ ಎಂದಿದ್ದಾರೆ.
‘ನೀವು ಏನು ಬಿತ್ತುತ್ತೀರೋ ಅದನ್ನೇ ಕೊಯ್ಯುತ್ತೀರಿ’ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಪೋಸ್ಟರ್ ಹಂಚಿಕೊಂಡಿರುವ ಹೊಂಬಾಳೆ ಫಿಲಂಸ್, ಮುಂದಿನ ಬೇಸಿಗೆಯಲ್ಲಿ ಚಿತ್ರ ಬಿಡುಗಡೆಯಾಗುವ ಬಗ್ಗೆ ಸುಳಿವು ನೀಡಿದೆ.