ವಿಚಲನ ತಂತ್ರಜ್ಞಾನವನ್ನು ಪರೀಕ್ಷಿಸಲು ನಾಸಾ ತನ್ನ ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಕಳೆದ ವರ್ಷದ ನವೆಂಬರ್ ನಲ್ಲಿ ಉಡಾವಣೆಯಾದ ವೆಂಡಿಂಗ್ ಮೆಷಿನ್-ಗಾತ್ರದ ಬಾಹ್ಯಾಕಾಶ ನೌಕೆ ಡಾರ್ಟ್ (DART) ಫುಟ್ಬಾಲ್ ಮೈದಾನದ ಗಾತ್ರದ ಕ್ಷುದ್ರಗ್ರಹ ಡೈಮಾರ್ಫಾಸ್ ನತ್ತ ಪ್ರಯಾಣಿಸಿದೆ ಮತ್ತು ಅದಕ್ಕೆ ಡಿಕ್ಕಿ ಹೊಡೆದಿದೆ ಮತ್ತು ಅದನ್ನು ಪಥದಿಂದ ಹೊರಕ್ಕೆ ತಳ್ಳಿದೆ.
ಬಾಹ್ಯಾಕಾಶದಲ್ಲಿ 10 ತಿಂಗಳ ಹಾರಾಟದ ನಂತರ, ನಾಸಾ ದ ಡಬಲ್ ಆಸ್ಟ್ರಾಯಿಡ್ ರಿ-ಡೈರೆಕ್ಷನ್ ಟೆಸ್ಟ್ (ಡಾರ್ಟ್), ವಿಶ್ವದ ಮೊದಲ ಗ್ರಹಗಳ ರಕ್ಷಣಾ ತಂತ್ರಜ್ಞಾನ ಪ್ರದರ್ಶನವು ಸೋಮವಾರ ತನ್ನ ಗುರಿಯನ್ನು ಯಶಸ್ವಿಯಾಗಿ ಪ್ರಭಾವಿಸಿದೆ. ಬಾಹ್ಯಾಕಾಶದಲ್ಲಿ ಕ್ಷುದ್ರಗ್ರಹವು ತನ್ನ ಪಥವನ್ನು ಬದಲಾಯಿಸುವಂತೆ ಮಾಡುವ ಪ್ರಥಮ ಪ್ರಯತ್ನ ಇದಾಗಿದೆ. ಈ ತಂತ್ರಜ್ಞಾನ ಬಳಸಿ ಭವಿಷ್ಯದಲ್ಲಿ ಭೂಮಿಗೆ ಅಪಾಯನ್ನುಂಟು ಮಾಡುವ ಯಾವುದೇ ಕ್ಷುದ್ರಗ್ರಹ, ಉಲ್ಕೆ ಅಥವಾ ಧೂಮಕೇತುಗಳ ಪಥ ಬದಲಾಯಿಸಲು ಸಾಧ್ಯವಿದೆ ಎಂದು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.
IMPACT SUCCESS! Watch from #DARTMIssion’s DRACO Camera, as the vending machine-sized spacecraft successfully collides with asteroid Dimorphos, which is the size of a football stadium and poses no threat to Earth. pic.twitter.com/7bXipPkjWD
— NASA (@NASA) September 26, 2022
ಮೇರಿಲ್ಯಾಂಡ್ನ ಲಾರೆಲ್ನಲ್ಲಿರುವ ಜಾನ್ಸ್ ಹಾಪ್ಕಿನ್ಸ್ ಅಪ್ಲೈಡ್ ಫಿಸಿಕ್ಸ್ ಲ್ಯಾಬೋರೇಟರಿ (APL)ಯ ಮಿಷನ್ ಕಂಟ್ರೋಲ್ ನಲ್ಲಿ ಸಂಜೆ 7:14 ಕ್ಕೆ ಪರೀಕ್ಷೆಯ ಯಶಸ್ವಿ ಫಲಿತಾಂಶವನ್ನು ಘೋಷಿಸಲಾಯಿತು. ಡಾರ್ಟ್ ಕೇವಲ 530 ಅಡಿ (160 ಮೀಟರ್) ವ್ಯಾಸದ ಸಣ್ಣ ಗಾತ್ರದ ಕ್ಷುದ್ರಗ್ರಹ ಮೂನ್ಲೆಟ್ ಡೈಮೊರ್ಫಾಸ್ ಅನ್ನು ಗುರಿಯಾಗಿಸಿತು. ಇದು ಡಿಡಿಮೋಸ್ ಎಂಬ 2,560-ಅಡಿ (780-ಮೀಟರ್) ದೊಡ್ಡದಾದ ಕ್ಷುದ್ರಗ್ರಹವನ್ನು ಸುತ್ತುತ್ತದೆ. ಈ ಎರಡೂ ಕ್ಷುದ್ರಗ್ರಹಗಳು ಭೂಮಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಈ ಮಿಷನ್ ಅನ್ನು ಪರೀಕ್ಷಾರ್ಥವಾಗಿ ನಡೆಸಲಾಗಿದೆ. ಡಾರ್ಟ್ ನೌಕೆಯ ಡ್ರಾಕೋ ಕ್ಯಾಮರಾ ಕಣ್ಣಲ್ಲಿ ಈ ಡಿಕ್ಕಿ ಸೆರೆಯಾಗಿದೆ.
ಈ ಮಿಷನ್ನ ಏಕಮುಖ ಪ್ರವಾಸವು ಬಾಹ್ಯಾಕಾಶ ನೌಕೆಯನ್ನು ಉದ್ದೇಶಪೂರ್ವಕವಾಗಿ ಕ್ಷುದ್ರಗ್ರಹದೊಂದಿಗೆ ಡಿಕ್ಕಿ ಹೊಡೆಸಲು ಯಶಸ್ವಿಯಾಗಿ ನ್ಯಾವಿಗೇಟ್ ಮಾಡಬಹುದೆಂದು ದೃಢಪಡಿಸಿದೆ, ಇದನ್ನು ಚಲನ ಪ್ರಭಾವ ಎಂದು ಕರೆಯಲಾಗುತ್ತದೆ.
ಡಾರ್ಟ್ ನ ಪ್ರಭಾವವು ಡಿಡಿಮೋಸ್ ಸುತ್ತ ಕ್ಷುದ್ರಗ್ರಹದ ಕಕ್ಷೆಯನ್ನು ಬದಲಾಯಿಸಿದೆ ಎಂದು ಖಚಿತಪಡಿಸಲು ತನಿಖಾ ತಂಡವು ಈಗ ನೆಲ-ಆಧಾರಿತ ದೂರದರ್ಶಕಗಳನ್ನು ಬಳಸಿಕೊಂಡು ಡೈಮೊರ್ಫಾಸ್ ಅನ್ನು ವೀಕ್ಷಿಸುತ್ತದೆ. ಈ ಡಿಕ್ಕಿಯು ಡೈಮೊರ್ಫೋಸ್ನ ಕಕ್ಷೆಯನ್ನು ಸುಮಾರು 1% ಅಥವಾ ಸರಿಸುಮಾರು 10 ನಿಮಿಷಗಳಷ್ಟು ಕಡಿಮೆಗೊಳಿಸುತ್ತದೆ ಎಂದು ಸಂಶೋಧಕರು ನಿರೀಕ್ಷಿಸುತ್ತಾರೆ. ಕ್ಷುದ್ರಗ್ರಹವು ಎಷ್ಟು ವಿಚಲಿತವಾಗಿದೆ ಎಂಬುದನ್ನು ನಿಖರವಾಗಿ ಅಳೆಯುವುದು ಪೂರ್ಣ ಪ್ರಮಾಣದ ಪರೀಕ್ಷೆಯ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ ಎಂದು ನಾಸಾ ಹೇಳಿಕೊಂಡಿದೆ.