ಉಡುಪಿ: ಬಹುನಿರೀಕ್ಷಿತ ಶಕಲಕ ಬೂಂ ಬೂಂ ಹಾರರ್ ಚಿತ್ರದ ಪೋಸ್ಟರ್ ಅನ್ನು ಸೆ. 26 ರಂದು ಸಂಜೆ 6 ಗಂಟೆಗೆ ಶ್ರೀ ನರಸಿಂಹ ದೇವಸ್ಥಾನ ನರಸಿಂಗೆ ಇಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ರಮೇಶ್ ಸಲ್ವಾನ್ಕಾರ್ ಬಿಡುಗಡೆ ಗೊಳಿಸಿದರು. ಚಲನಚಿತ್ರವು ಡಿಸೆಂಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಯಿತು.
ಅತಿಥಿಗಳಾಗಿ ಭಾಗವಹಿಸಿದ್ದ ದೇವಳದ ಅಧ್ಯಕ್ಷ ಎಸ್ ಗೋಪಾಲಕೃಷ್ಣ ನಾಯಕ್, ಆನಂದ ನಾಯಕ್ ಆರ್ಬಿ, ಶ್ರೀ ದುರ್ಗಾಪರಮೇಶ್ವರಿ ಸೊಸೈಟಿಯ ಅಧ್ಯಕ್ಷ ಅಶೋಕ ಕಾಮತ್ ಕೋಡಂಗೆ, ಡಾ. ಶ್ರೀಧರ್ ಡಿ. ಶುಭಾಶಯ ಕೋರಿದರು.
ಯು.ಎನ್ ಸಿನೆಮಾಸ್ ಬ್ಯಾನರ್ ನಡಿ ಮೂಡಿಬರುತ್ತಿರುವ ಈ ಚಲನಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶನ ಮಾಡಿದ್ದಾರೆ. ನಿತ್ಯಾನಂದ ನರಸಿಂಗೆ, ಉಮೇಶ್ ಪ್ರಭು ಮಣಿಬೆಟ್ಟು ನಿರ್ಮಾಣ ಮಾಡಿರುವ ಚಿತ್ರಕ್ಕೆ ಡಾಲ್ವಿನ್ ಕೊಳಲಗಿರಿ ಸಂಗೀತ ನೀಡಿದ್ದಾರೆ. ಳುನಾಡಿನ ಖ್ಯಾತ ಛಾಯಾಗ್ರಾಹಕ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕ್ಯಾಮರಾ ಕೈಚಳಕವಿದ್ದು, ಪ್ರಜ್ವಲ್ ಸುವರ್ಣ ಅವರ ಸಂಕಲನವಿದೆ.
ಈ ಚಿತ್ರ ಹಾರರ್ ಸಸ್ಪೆನ್ಸ್ ಕಥೆಯನ್ನು ಒಳಗೊಂಡಿದ್ದು, ತುಳು ಚಿತ್ರ ರಂಗದ ಮೊದಲ ಹಾರಾರ್ ಸಸ್ಪೆನ್ ಚಲನಚಿತ್ರ ಎಂಬ ಹೆಗ್ಗಳಿಕೆ ಹೊಂದಿದೆ.
ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮರ್ಕಮೆ, ಮಿಮಿಕ್ರಿ ಶರಣ್ ಜೊತೆಯಾಗುವ ಸನ್ನಿವೇಶಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸಲಿದೆ ಎಂದು ನಿರ್ದೇಶಕ ಶ್ರೀಶ ಎಳ್ಳಾರೆ ಹೇಳುತ್ತಾರೆ.
ಚಿತ್ರದಲ್ಲಿ ರೂಪಶ್ರೀ ವರ್ಕಾಡಿ, ವಸಂತ್ ಮುನಿಯಾಲ್, ಗಾಡ್ವಿನ್ ಸ್ಪಾರ್ಕಲ್, ಲಕ್ಷಾ ಶೆಟ್ಟಿ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಪ್ರವೀಣ್ ಆಚಾರ್ಯ,ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ಅಭಿನಯಿಸಿದ್ದಾರೆ