ಉಡುಪಿ: ಸೆಪ್ಟೆಂಬರ್ 26 ರಂದು ಸಂಜೆ 6 ಗಂಟೆಗೆ ಶ್ರೀ ನರಸಿಂಹ ದೇವಸ್ಥಾನ ನರಸಿಂಗೆಯಲ್ಲಿ ತುಳು ಚಿತ್ರ ಶಕಲಕ ಬೂಮ್ ಬೂಮ್ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಘೋಷಿಸಲಿರುವುದು.
ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ ಸಲ್ವಾನ್ಕಾರ್ ಅಲೆವೂರು, ಚಿತ್ರದ ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ, ಉಮೇಶ್ ಪ್ರಭು ಮಣಿಬೆಟ್ಟು, ನಿರ್ದೇಶಕ ಶ್ರೀಶ ಎಳ್ಳಾರೆ , ಚಿತ್ರದ ನಾಯಕ ಗೂಡ್ವಿನ್ ಸ್ಪರ್ಕಲ್ ಹಾಗೂ ಚಿತ್ರ ತಂಡ ಭಾಗವಹಿಸಲಿರುವುದು ಎಂದು ನಿರ್ಮಾಪಕ ನಿತ್ಯಾನಂದ ನರಸಿಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ