ಉಡುಪಿ: ಇಲ್ಲಿನ ಮಠದಬೆಟ್ಟು ರಸ್ತೆಯಲ್ಲಿರುವ ಪಂಚಮಿ ಸೌಹಾರ್ದ ಸಹಕಾರಿ ನಿಯಮಿತ ಇದರ 2021-22 ಸಾಲಿನ ವಾರ್ಷಿಕ ಮಹಾಸಭೆಯ ಸೂಚನಾ ಪತ್ರ ಹಾಗೂ ವಾರ್ಷಿಕ ಲೆಕ್ಕಪತ್ರಗಳ ವರದಿ ವಾಚನವನ್ನು ಸೆ.24 ರಂದು ಕುಂಜಿಬೆಟ್ಟುವಿನ ಶ್ರೀ ಕೃಷ್ಣ ಪ್ರಜ್ಞ ಪ್ರತಿಷ್ಠಾನದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಚಮಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸತ್ಯಪ್ರಾದ್ ಶೆಣೈ ಸೂಚನಾ ಪತ್ರ ಓದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯು 2021-22 ನೇ ಸಾಲಿನಲ್ಲಿ 6 ಕೋಟಿಗೂ ಅಧಿಕ ಠೇವಣಿ ಹೊಂದಿದ್ದು, 5 ಕೋಟಿ ಸಾಲ ನೀಡಿದೆ. ಸುಮಾರು 1 ಕೋಟಿ ರೂ ಗಳನ್ನು ವಿವಿಧ ಬ್ಯಾಂಕುಗಳಲ್ಲಿ ನಿಯೋಜಿಸಲಾಗಿದೆ. ಸಂಸ್ಥೆಯು ಗ್ರಾಹಕ ಸ್ನೇಹಿ ಪರಿಸರವನ್ನು ಹೊಂದಿದ್ದು, ತನ್ನ ಸೇವೆಯ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿಯನ್ನು ಸಾಧಿಸುವ ಪ್ರಯತ್ನ ಮಾಡಲಿದೆ ಎಂದು ವಾರ್ಷಿಕ ವರದಿ ಮಂಡಿಸಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾತಿ ಪ್ರಭು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೆ. ಹರೀಶ್ ಪ್ರಭು, ನಿರ್ದೇಶಕರಾದ ಸಂಜೀವ ಪ್ರಭು, ರಾಘವೇಂದ್ರ ನಾಯಕ್, ಎಂ.ಉಪೇಂದ್ರ ನಾಯಕ್, ವಿಜಯ್ ಶೆಣೈ, ಸಂದೇಶ್ ಕಾಮತ್, ಕಾರ್ತಿಕ್ ಪ್ರಭು, ರಾಘವೇಂದ್ರ ನಾಯಕ್, ಶ್ರೀಮತಿ ನವ್ಯ ಸಿ ಪ್ರಭು, ರವೀಂದ್ರ ಕೇಳ್ಕರ್, ಸುರೇಂದ್ರ ನಾಯಕ್, ಶಿವಪ್ರಸಾದ್ ಉಪಸ್ಥಿತರಿದ್ದರು.
ಶ್ರೀಮತಿ ರೇವತಿ ನಾಯಕ್ ಸ್ವಾಗತಿಸಿ ಅನುಪಾಲನಾ ವರದಿ ವಾಚಿಸಿದರು. ಸಂಸ್ಥೆಯ ನಿರ್ದೇಶಕಿ ಪ್ರೀತಿ ಶೆಣೈ ವಾರ್ಷಿಕ ನಡಾವಳಿ ವಾಚಿಸಿದರು. ಕು.ಪ್ರಾರ್ಥನಾ ಪ್ರಾರ್ಥಿಸಿದರು. ವಿಜಯ್ ಶೆಣೈ ವಂದಿಸಿದರು. ಸ್ವಾತಿ ಪ್ರಭು ನಿರೂಪಿಸಿದರು.