ಗೋಕರ್ಣ ಪರ್ತಗಾಳಿ ಮಠಾಧೀಶರಿಂದ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ಭೇಟಿ

ಉಡುಪಿ: ಭಾನುವಾರದಂದು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಇಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಭೇಟಿ ನೀಡಿದರು.

ಗೋಕರ್ಣ ಪರ್ತಗಾಳಿ ಜೀವವೋತ್ತಮ ಮಠಾಧಿಪತಿಯಾಗಿ ಪ್ರಥಮ ಬಾರಿಗೆ ಭೇಟಿ ನೀಡಿದ ಶ್ರೀಪಾದರನ್ನು ತೆಂಕಪೇಟೆಯ ಐಡಿಯಲ್ ಸರ್ಕಲ್ ನಿಂದ ಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತ, ಚಂಡೆ, ಮಂಗಳವಾದ್ಯದ ಮೂಲಕ ಸ್ವಾಗತಿಸಿ ದೇವಾಲಯಕ್ಕೆ ಕರೆತರಲಾಯಿತು. ದೇವರ ಭೇಟಿಯ ಬಳಿಕ ವೇದಿಕೆಯಲ್ಲಿನ ಶ್ರೀಮದ್ ಭಾಗವತ ಗೃಂಥಕ್ಕೆ ಆರತಿ ಬೆಳಗಿಸಿದರು. ಪ್ರವಚನಕಾರದ ವಿದ್ವಾನ್ ಅನಂತಕೃಷ್ಣ ಆಚಾರ್ಯರನ್ನು ಶಾಲು ಹೊದಿಸಿ ಗೌರವಿಸಿದರು.

ದೇವಳದ ಆಡಳಿತ ಮೂಕ್ತೇಸರ ಪಿ. ವಿ. ಶೆಣೈ ಶ್ರೀಪಾದರ ಪಾದ ಪೂಜೆ ನೆರವೇರಿಸಿ ಸ್ವಾಗತಿಸಿದರು. ಚೇಂಪಿ ಶ್ರೀಕಾಂತ್ ಭಟ್ ಪ್ರಾಸ್ತವಿಕವಾಗಿ ಮಾತನಾಡಿದರು. ಚೇಂಪಿ ರಾಮಚಂದ್ರ ಭಟ್ ಹಾಗೂ ವೈದಿಕ ವೃಂದದವರು ಪ್ರಾರ್ಥಿಸಿದರು. ಶ್ರೀಗಳು ಅನುಗ್ರಹ ಸಂದೇಶ ನೀಡಿ ಭಕ್ತಾಧಿಗಳಿಗೆ ಫಲ ಮಂತ್ರಾಕ್ಷತೆ ನೀಡಿದರು.

ಶ್ರೀಮದ್ ಭಾಗವತ ಪ್ರವಚನ ಪ್ರಾಯೋಜಕರಾದ ಜಗದೀಶ್ ಪೈ, ವಸಂತ ಕಿಣಿ, ವಿಶ್ವನಾಥ ಭಟ್, ಅಶೋಕ ಬಾಳಿಗಾ, ಗಣೇಶ ಕಿಣಿ, ರೋಹಿತಾಕ್ಷ ಪಡಿಯಾರ್, ವಿನಾಯಕ ಭಟ್, ಜಿ ಎಸ್ ಬಿ ಮಹಿಳಾ ಮತ್ತು ಯುವಕ ಮಂಡಳಿ ಸದಸ್ಯರು ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.