ಗಂಗೊಳ್ಳಿ : ರಾಜ್ಯದ ಆಡಳಿತ ವಿರೋಧಿ ಸರಕಾರದ ವಿರುದ್ಧ ಜನತೆ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ. ಕರಾವಳಿ ಭಾಗದ ಜನರನ್ನು ಮತ್ತು ಮೀನುಗಾರಿಕೆಯನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿರುವ ಈ ಭ್ರಷ್ಟ ಸಮ್ಮಿಶ್ರ ಸರಕಾರಕ್ಕೆ ಕರಾವಳಿಯ ಜನತೆ ಮತ್ತೊಮ್ಮೆ ಪಾಠ ಕಲಿಸಿದ್ದಾರೆ. ಬಿಜೆಪಿಯನ್ನು ಒಂದಂಕಿಗೆ ಇಳಿಸುತ್ತೇವೆ ಎಂದು ಬೀಗುತ್ತಿದ್ದ ಮೈತ್ರಿ ಪಕ್ಷದವನ್ನು ಮತದಾರರು ಒಂದಂಕಿಗೆ ಇಳಿಸಿ ಮೈತ್ರಿ ಸರಕಾರದ ಮುಖಂಡರಿಗೆ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುವುದು ನಿಶ್ಚಿತ ಎಂದು ತ್ರಾಸಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಮೋ ಸದಾಶಿವ ಕಂಚುಗೋಡು ಹೇಳಿದರು.
ತ್ರಾಸಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ತ್ರಾಸಿ ಬಸ್ ನಿಲ್ದಾಣ ಮತ್ತು ತ್ರಾಸಿ ಬೀಚ್ನಲ್ಲಿ ಜರಗಿದ ಬಿಜೆಪಿ ವಿಜಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ತ್ರಾಸಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಖಾರ್ವಿ, ತ್ರಾಸಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಿಥುನ್ ದೇವಾಡಿಗ, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಶಾರದಾ ಡಿ.ಬಿಜೂರು, ಹೊಸಾಡು ಗ್ರಾಪಂ ಸದಸ್ಯ ರಮೇಶ ಆಚಾರ್, ಪಾಂಡುರಂಗ ದೇವಾಡಿಗ, ಗಣೇಶ ನಾಯ್ಕ್, ಪ್ರಭಾಕರ ಮೊವಾಡಿ, ರವಿ ಶೆಟ್ಟಿಗಾರ್, ಪ್ರದೀಪ ಖಾರ್ವಿ, ರಿತೇಶ ಪೈ, ಹರೀಶ ಖಾರ್ವಿ, ಸಂತೋಷ ಖಾರ್ವಿ, ರಾಘು ಆಚಾರ್, ಶರತ್ ಮೊವಾಡಿ, ಸೂರಜ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.