ಶಾರ್ಜಾ: ಇಲ್ಲಿ ನಡೆದ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ಫೈನಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವು ಪಂದ್ಯ ಸೋತಿದ್ದು, ಆಫ್ಘನ್ನರು ಖುಷಿಯಿಂದ ಕುಣಿಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#Afghans 🇦🇫 Celebrations in Capital #Kabul , #Afghanistan to celebrate Sri Lanka's victory over Pakistan in the #AsiaCup2022Final . pic.twitter.com/8ZnFkN5aKv
— Abdulhaq Omeri (@AbdulhaqOmeri) September 11, 2022
ಶ್ರೀಲಂಕಾವು 171 ರನ್ ಪೇರಿಸಿದ್ದರೆ, ಪಾಕಿಸ್ತಾನವು ಈ ಮೊತ್ತವನ್ನು ಬೆನ್ನಟ್ಟಲು ಆಗದೆ ಇಪ್ಪತ್ತು ಓವರ್ ಗಳಲ್ಲಿ 147 ರನ್ ಗಳಿಸಿ ಸೋತಿದೆ.
ಪಾಕ್ ಸೋತಿದ್ದು ಆಫ್ಘನ್ನರಿಗೆ ಖುಷಿಯಾಗಿದ್ದು, ಅವರು ಕುಣಿದು ಕುಪ್ಪಳಿಸಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ ಎಂದು ಟ್ವಿಟರ್ ಬಳಕೆದಾರರೊಬ್ಬರು ವೀಡಿಯೋ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಪಾಕ್ ಮತ್ತು ಆಫ್ಘನ್ ತಂಡಗಳ ನಡುವೆ ಪಂದ್ಯದ ಸಂದರ್ಭದಲ್ಲಿ ಎರಡೂ ದೇಶಗಳ ಅಭಿಮಾನಿಗಳ ಮಧ್ಯೆ ಸಂಘರ್ಷ ಏರ್ಪಟ್ಟು ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಪಾಕ್ ಸೋತಿದ್ದು ಆಫ್ಘನ್ ಕ್ರಿಕೆಟ್ ಪ್ರೇಮಿಗಳು ಹರ್ಷಾಚರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.