ಕೊಡವೂರು: ನಾರಾಯಣ ಗುರುಗಳ 168ನೇ ಜಯಂತಿಯನ್ನು ಕೊಡವೂರು ವಾರ್ಡಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಾರಾಯಣ ಗುರುಗಳು ಕಷ್ಟದಿಂದ ಇನ್ನೊಬ್ಬರ ಕಷ್ಟಕ್ಕೆ ಉತ್ತರ ಕೊಟ್ಟವರು. ನಮ್ಮ ಕಷ್ಟಗಳನ್ನು ಅರಿತು ಅದಕ್ಕೆ ಉತ್ತರ ಕೊಡಬೇಕು ಎಂದು ಕೊಡವೂರಿನ ಮಕ್ಕಳ ಸಮಿತಿ ಯೋಚಿಸಿ ಗಣೇಶ ಚತುರ್ಥಿಯ ದಿನ ಹುಲಿವೇಷ ಹಾಕಿ ಬಂದಿರುವಂತಹ ಧನಾತ್ಮಕ ಶಕ್ತಿಯನ್ನು ದೀನರಿಗೆ / ದುರ್ಬಲರಿಗೆ / ಅಂಗವಿಕಲರಿಗೆ/ ನೀಡುವಂತಹ ಕೆಲಸವನ್ನು ನಾರಾಯಣ ಗುರು ಜಯಂತಿಯ ದಿನ ಆಚರಿಸಲಾಯಿತು.
ಗುರುಗಳು ಹಿಂದೂ ಧರ್ಮದ ಅನೇಕ ಅಂಕುಡೊಂಕುಗಳನ್ನು ಸುಧಾರಿಸಿದರು. ಮತಾಂತರ ಆಗಿರುವವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತಂದು ಹಿಂದೂ ಧರ್ಮದ ರಕ್ಷಕರಾದರು. ಅವರು ಕೇವಲ ವ್ಯಕ್ತಿಯಲ್ಲ ಶಕ್ತಿ, ಕೇವಲ ಶಕ್ತಿ ಅಲ್ಲ ಅದೊಂದು ದೇವತಾ ಅವತಾರ ಪುರುಷ. ಅವರು ಕೇವಲ ಒಂದು ಸಮಾಜದ ವ್ಯಕ್ತಿಯಲ್ಲ ಅವರು ನಮ್ಮ ಧರ್ಮದ ರಕ್ಷಕರು. ಎಲ್ಲಾ ಮಕ್ಕಳು ಅವರಂತೆ ಆದಾಗ ಮಾತ್ರ ಅವರ ಯೋಚನೆಯಂತೆ ಈ ನಮ್ಮ ದೇಶ ರಾಮ ರಾಜ್ಯವಾಗಲು ಸಾಧ್ಯ ಎಂದು ನಗರಸಭಾ ಸದಸ್ಯ ವಿಜಯ ಕೊಡವೂರು ಹೇಳಿದರು.
ಕೊಡವೂರು ವಾರ್ಡಿನಲ್ಲಿ ಅನೇಕ ಕಾರ್ಯಕ್ರಮಗಳು ಆಗುತ್ತಾ ಇದ್ದು, ಬಡವರಿಗೋಸ್ಕರ, ದಿನ ದುರ್ಬಲರಿಗೋಸ್ಕರ, ಅಂಗವಿಕಲರಿಗೋಸ್ಕರ ಅನೇಕ ಕಾರ್ಯಕ್ರಮ ನಡೆಯುತ್ತಿದೆ, ಮಕ್ಕಳ ಸಮಿತಿ ವತಿಯಿಂದ ಏನಾದರೂ ಮಾಡಬೇಕು ಎಂದು ಗಣೇಶ ಹಬ್ಬದ ದಿನದಂದು ನಾವು ಹುಲಿವೇಷ ಹಾಕಿಕೊಂಡು ಮನೆ ಮನೆಗೆ ತೆರಳಿ ಯಾವುದೇ ಬೇಡಿಕೆ ಇಲ್ಲದೆ ಹಣವನ್ನು ಸಂಗ್ರಹಿಸಿ ಅವರಿಗೆ ನೀಡುವ ಚಿಂತನೆಯನ್ನು ಮಾಡಿದ್ದೇವೆ.
ಈ ಮೂಲಕ ಸ್ವಾತಿ ಇವರಿಗೆ ಮನೆ ಕಟ್ಟಲು ಧನ ಸಹಾಯವನ್ನು, ರಮೇಶ್ ಪೂಜಾರಿ, ಬಾಳು ನಾಯಕ್, ಪ್ರೇಮ ರಾವ್, ಇವರುಗಳಿಗೆ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯ, ಭೀಮಪ್ಪ ಕಾಪು ಇವರಿಗೆ ಗಾಲಿ ಕುರ್ಚಿ, ಚಂದ್ರಶೇಕರ್ ಇವರ ಮಗಳಿಗೆ ಶಿಕ್ಷಣಕ್ಕಾಗಿ ಧನ ಸಹಾಯ ಮಾಡಲಾಯಿತು.
ಈ ಎಲ್ಲಾ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವುದು ನಗರ ಸಭಾ ಸದಸ್ಯ ವಿಜಯ್ ಕೊಡವೂರು ಎಂದು ಮಕ್ಕಳು ತಿಳಿಸಿದರು.
ಸುಮಾರು 13 ಜನ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ, ದಿವ್ಯಾಂಗರಿಗೆ, ವಯಸ್ಸಾದವರಿಗೆ ಅಕ್ಕಿ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಾರಾಯಣ್ ಬಲ್ಲಾಳ್, ಕಾಳು ಶೇರಿಗಾರ್,ಭಾಸ್ಕರ್ ಪಾಲನ್, ಕಿಶೋರ್ ಪೂಜಾರಿ, ಅಶೋಕ್ ಶೆಟ್ಟಿಗಾರ್, ಗುಣವತಿ, ಸದಾಶಿವ ದೇವಾಡಿಗ ಎಲ್ಲೂರು , ಕೃಷ್ಣ ಶೇರಿಗಾರ್,
ಚಂದ್ರಚಿತ್ರ, ರಾಮ ಪೂಜಾರಿ,ಮೋಹನ್ ಸುವರ್ಣ, ಶೇಖರ್ ಮಾಬಿಯಾನ್,ದಿನೇಶ್ ಲಕ್ಷ್ಮೀ ನಗರ, ದಿನೇಶ್ ಸಾವಂತ್ ಉಡುಪಿ, ಹರೀಶ್ ಕೊಪ್ಪಳ ತೋಟ, ಪ್ರತೀಷ್,ಮಂಜುನಾಥ್,ಸಂದೇಶ್,ರವಿರಾಜ್,ಮಂಜುನಾಥ, ರವಿರಾಜ್ ಹಾಜರಿದ್ದರು.
ಅರವಿಂದ್ ಭಟ್ ನಿರೂಪಿಸಿದರು. ಪ್ರೀತಿ ವಿಜಯ ಕೊಡವೂರು ಸ್ವಾಗತಿಸಿದರು. ಪ್ರಭಾತ್, ಅಜಿತ್ ಮತ್ತು ಚಂದ್ರಕಾಂತ್ ವಂದಿಸಿದರು.












