ಉಡುಪಿ: ಸಹಾಯ ಹಸ್ತ ಲಯನ್ಸ್ ಕ್ಲಬ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಅವಿಭಜಿತ ದ.ಕ ಜಿಲ್ಲೆಯ ಗಾನಕೋಗಿಲೆಗಳ ಪ್ರತಿಭೆ ಅನಾವರಣಗೊಳಿಸುವ ‘ಹಾಡು ನೀ ಹಾಡು’ ಸಂಗೀತ ರಿಯಾಲಿಟಿ ಶೋ ನ ಆಡಿಷನ್ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಾಗೂ ಕುಂದಾಪುರದ ಆರ್.ಎನ್ ಶೆಟ್ಟಿ ಪಿಯು ಕಾಲೇಜಿನಲ್ಲಿ ನಡೆಯುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಆಡಿಷನ್ ನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ.
ಸೆ. 18 ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯ, ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ವಿ ಎಸ್ ಆಚಾರ್ಯ ಸಭಾಂಗಣ ಹಾಗೂ ಪುತ್ತೂರಿನ ಸೈಂಟ್ ವಿಕ್ಟರ್ಸ್ ಗರ್ಲ್ಸ್ ಹೈಸ್ಕೂಲಿನಲ್ಲಿ ನಡೆಯಲಿದೆ. ನೋಂದಣಿ ಸಂಪೂರ್ಣ ಉಚಿತವಾಗಿದೆ. 5 ರಿಂದ 10 ನೇ ತರಗತಿವರೆಗಿನ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕಾರ್ಯಕ್ರಮವು ವಿ4 ಚಾನೆಲ್ ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದ್ದು, ಆರು ತಿಂಗಳ ಕಾಲ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ, ಆಕರ್ಷಕ ಉಡುಗೊರೆಗಳು ಮತ್ತು ಹೆಸರಾಂತ ಗಾಯಕ-ಗಾಯಕಿ, ನಟ-ನಟಿಯರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ.
ಆಡಿಷನ್ ನಲ್ಲಿ ಭಾಗವಹಿಸಲು ನಿಯಮಗಳು:
# ಶೃತಿ ಪೆಟ್ಟಿಗೆ, ತಾಳ, ಲಯ, ಕರೋಕೆ ಇತ್ಯಾದಿ ಸಂಗೀತ ಪರಿಕರಗಳನ್ನು ಬಳಸುವಂತಿಲ್ಲ.
# ಭಾವಗೀತೆ, ಜನಪದ ಗೀತೆ, ಸಿನಿಮಾ ಹಾಡು ಇತ್ಯಾದಿ ಯಾವುದೇ ಕನ್ನಡ ಹಾಡನ್ನು ಹಾಡಬಹುದು.
# 5 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಮಾತ್ರ ಅವಕಾಶ.
# ಸ್ಪರ್ಧಾಳುಗಳು ಸ್ಥಳೀಯ(ಅವಿಭಜಿತ ದ.ಕ ಜಿಲ್ಲೆ) ನಿವಾಸಿಗಳಾಗಿರಬೇಕು.
# ಒಂದು ಬಾರಿ ನೋಂದಣಿಗೆ ಮಾತ್ರ ಅವಕಾಶ.
ಹೆಚ್ಚಿನ ಮಾಹಿತಿಗಾಗಿ: 9108560215 ಸಂಪರ್ಕಿಸಿ.