ಇಂಡೋನೇಶಿಯಾದ ಬಾಲಿ ದ್ವೀಪದಲ್ಲಿ ಭಗವಾನ್ ವಿಷ್ಣು ಮತ್ತು ಗರುಡನ 46 ಮೀ ಪೀಠದ ತಳಭಾಗವನ್ನು ಒಳಗೊಂಡಂತೆ 122 ಮೀ ಎತ್ತರದ ಮೂರ್ತಿ ಇದೆ. ಬಾಲಿಯ ಗರುಡ ವಿಷ್ಣು ಕೆಂಚನಾ ಕಲ್ಚರಲ್ ಪಾರ್ಕ್ ನಲ್ಲಿ ಈ ಪ್ರತಿಮೆಯನ್ನು ಇರಿಸಲಾಗಿದೆ. ನ್ಯೋಮನ್ ನುವಾರ್ಟಾ ವಿನ್ಯಾಸಗೊಳಿಸಿದ ಈ ಮೂರ್ತಿಯನ್ನು ಸೆಪ್ಟೆಂಬರ್ 2018 ರಲ್ಲಿ ಉದ್ಘಾಟಿಸಲಾಯಿತು. ಈ ಪ್ರತಿಮೆಯನ್ನು ಇಂಡೋನೇಷ್ಯಾದ ಅತಿ ಎತ್ತರದ ಪ್ರತಿಮೆಯಾಗಿ ವಿನ್ಯಾಸಗೊಳಿಸಲಾಗಿದೆ.
ತಮ್ಮ ಹಿಂದೂ ಸಂಸ್ಕೃತಿಯ ಬೇರುಗಳನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಅಮೃತವನ್ನು ಹುಡುಕಿ ತಂದ ಗರುಡನ ನೆನಪಿಗಾಗಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಂಡೋನೇಷಿಯಾದ ಅಧ್ಯಕ್ಷ ಜೋಕೋ ವಿಡೋಡೋ ಈ ಮೂರ್ತಿಯನ್ನು ಸೆ.22-2018ರಂದು ಉದ್ಘಾಟಿಸಿದರು.
ಸ್ಮಾರಕವು 21 ಅಂತಸ್ತಿನ ಕಟ್ಟಡದಷ್ಟು ಎತ್ತರವಾಗಿದೆ. ಇದು 4000 ಟನ್ಗಳಷ್ಟು ತೂಗುತ್ತದೆ, ಇದು ಇಂಡೋನೇಷ್ಯಾದ ಅತ್ಯಂತ ಭಾರವಾದ ಪ್ರತಿಮೆಯಾಗಿದೆ. ಕಲಾಕೃತಿಯನ್ನು 21,000 ಸ್ಟೀಲ್ ಬಾರ್ಗಳು, 170,000 ಬೋಲ್ಟ್ಗಳಿಂದ ಬೆಂಬಲಿಸಲ್ಪಟ್ಟ ತಾಮ್ರ ಮತ್ತು ಹಿತ್ತಾಳೆಯಿಂದ ರಚಿಸಲಾಗಿದೆ. ಜೊತೆಗೆ ಸ್ಟೇನ್ಲೆಸ್ ಸ್ಟೀಲ್ ಫ್ರೇಮ್ ಉಕ್ಕು ಮತ್ತು ಕಾಂಕ್ರೀಟ್ ಗಳನ್ನು ಬಳಸಲಾಗಿದೆ. ವಿಷ್ಣುವಿನ ಕಿರೀಟವನ್ನು ಚಿನ್ನದ ಮೊಸಾಯಿಕ್ಸ್ನಿಂದ ಮುಚ್ಚಲಾಗಿದೆ ಮತ್ತು ಪ್ರತಿಮೆಯು ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ. ಈ ಶಿಲ್ಪದ ಕೆಳಗೆ ರೆಸ್ಟೋರೆಂಟ್, ಮ್ಯೂಸಿಯಂ ಮತ್ತು ವೀಕ್ಷಣಾ ಗ್ಯಾಲರಿ ಇದೆ.