ಪಡುಬಿದ್ರೆ: ರೋಟರಿ ಕ್ಲಬ್ಬಿನ ಅಂಗಸಂಸ್ಥೆಯಾದ ಪಡುಬಿದ್ರೆ ರೋಟರಿ ಸಮುದಾಯದಳದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ರೋಟರಿ ಜಿಲ್ಲಾ ಉಪಸಭಾಪತಿ ರೋ. ಸಚ್ಚಿದಾನಂದ ನಾಯಕ್ ಅವರ ಉಪಸ್ಥಿತಿಯಲ್ಲಿ ನೆರವೇರಿತು.
ಪದಪ್ರಧಾನ ಮಾಡಿ ಮಾತನಾಡಿದ ಅವರು, ರೋಟರಿಯ ವ್ಯಕ್ತಿತ್ವ ಬೆಳೆಸುವ ಕಾರ್ಯದಿಂದ ವ್ಯಕ್ತಿ ನಿರ್ಮಾಣ, ಜನಸೇವೆಯಿಂದ ಸಧೃಡ ಸಮಾಜ ನಿರ್ಮಾಣ, ಮತ್ತು ದಾನಿಗಳಿಂದ ಮನುಕುಲದ ಸಾಂತ್ವನಕಾರ್ಯ ನಿರಂತರವಾಗಿ ನಡೆಯುತ್ತಿದೆ.
ಸಮುದಾಯದಳವು ರೋಟರಿಯ ಪ್ರತಿಬಿಂಬ. ನಮ್ಮ ಸರ್ವತೋಮುಖ ಬೆಳವಣಿಗೆಗೆ ರೋಟರಿ ಸಂಸ್ಥೆ ಸಹಕಾರಿ ಎಂದು ಹೇಳಿದರು.
ವಲಯ 5ರ ಆರ್.ಸಿ.ಸಿ ಸಂಯೋಜನಾಧಿಕಾರಿ ರೋ.ಗುರುರಾಜ್ ಭಟ್ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿ ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು.
ರೋಟರಿ ಅಧ್ಯಕ್ಷೆ ರೋ. ಗೀತಾ ಅರುಣ್ ಪಡುಬಿದ್ರೆ ಮಾತನಾಡಿ, ಈ ಸಂಸ್ಥೆ ರೋಟರಿಯ ಪ್ರತಿಯೊಂದು ಚಟುವಟಿಕೆಯಲ್ಲಿ ಸದಾ ಭಾಗವಹಿಸಿ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುತ್ತಿದೆ. ಸತ್ಕಾರ್ಯಗಳಿಗೆ ರೋಟರಿಯಿಂದ ಸದಾ ಸಹಾಯವಿದೆ ಎಂದರು.
ನೂತನ ಅಧ್ಯಕ್ಷೆ ಕು. ಭಾಗ್ಯಶ್ರೀ ಕರ್ಕೇರಾ, ಕಾರ್ಯದರ್ಶಿ ಕು. ತನಿಷಾ ಜಿ ಕುಕ್ಯಾನ್ ಮತ್ತು ಇತರ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ವಲಯ ರೋಟರಿ ಸಂಯೋಜನಾಧಿಕಾರಿ ರೋ. ರಿಯಾಜ್ ಮುದರಂಗಡಿ, ಆರ್.ಸಿ.ಸಿ. ಸಭಾಪತಿ ರೋ. ಸಂತೋಷ್ ಪಡುಬಿದ್ರೆ, ಕಾರ್ಯದರ್ಶಿ ರೋ. ಜ್ಯೋತಿ ಮೆನನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಅದ್ವಿತ್ ಕುಮಾರ್ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಕು. ತನಿಷಾ ಜಿ. ಕುಕ್ಯಾನ್ ವಂದಿಸಿದರು. ಕಾರ್ತಿಕ್ ಮುಲ್ಕಿ ಕಾರ್ಯಕ್ರಮ ನಿರ್ವಹಿಸಿದರು.