ಶಿಕ್ಷಕರ ದಿನಾಚರಣೆಯಂದು ಪಿಎಂ-ಶ್ರೀ ಶಾಲಾ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ

ನವದೆಹಲಿ: ಶಿಕ್ಷಕರ ದಿನಾಚರಣೆಯಂದು ಭಾರತದಾದ್ಯಂತದ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣ ಯೋಜನೆಗೆ ಪ್ರಧಾನಿ ಮೋದಿ ಶ್ರೀ ಕಾರ ನೀಡಿದ್ದಾರೆ. ಸೋಮವಾರ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, “ಇಂದು, ಶಿಕ್ಷಕರ ದಿನದಂದು ನಾನು ಹೊಸ ಉಪಕ್ರಮವನ್ನು ಘೋಷಿಸಲು ಸಂತೋಷಪಡುತ್ತೇನೆ. ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ (PM-SHRI) ಯೋಜನೆ ಅಡಿಯಲ್ಲಿ ಭಾರತದಾದ್ಯಂತ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣವಾಗಲಿದೆ. ಇವುಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಪೂರ್ಣ ಚೈತನ್ಯವನ್ನು ಆವರಿಸುವ ಮಾದರಿ ಶಾಲೆಗಳಾಗುತ್ತವೆ” ಎಂದಿದ್ದಾರೆ.

“ಪಿಎಂ-ಶ್ರೀ ಶಾಲೆಗಳು ಶಿಕ್ಷಣವನ್ನು ನೀಡುವ ಆಧುನಿಕ, ಪರಿವರ್ತನೆಯ ಮತ್ತು ಸಮಗ್ರ ವಿಧಾನವನ್ನು ಹೊಂದಿರುತ್ತದೆ. ಆವಿಷ್ಕಾರ ಆಧಾರಿತ, ಕಲಿಕಾ ಕೇಂದ್ರಿತ ರೀತಿಯಲ್ಲಿ ಬೋಧನೆಗೆ ಒತ್ತು ನೀಡಲಾಗುವುದು. ಇತ್ತೀಚಿನ ತಂತ್ರಜ್ಞಾನ, ಸ್ಮಾರ್ಟ್ ಕ್ಲಾಸ್‌ರೂಮ್‌ಗಳು, ಕ್ರೀಡೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಧುನಿಕ ಮೂಲಸೌಕರ್ಯಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ”.

“ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರವನ್ನು ಪರಿವರ್ತಿಸಿದೆ. ಈ ನೀತಿಯ ಅಂತರ್ಗತ ಪಿಎಂ-ಶ್ರೀ ಶಾಲೆಗಳು ಭಾರತದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರಯೋಜನವನ್ನು ನೀಡುತ್ತವೆ ಎನ್ನುವುದು ನನಗೆ ಖಚಿತವಾಗಿದೆ” ಎಂದಿದ್ದಾರೆ.