ಮಾನವ ಶ್ರಮದಿಂದ ಮರಳು ಬ್ಲಾಕ್‍ ವಿಲೇವಾರಿಗೆ ಪೂರಕ ದಾಖಲೆ ಸಲ್ಲಿಸಲು ಸೆಪ್ಟಂಬರ್ 12 ಕೊನೆ ದಿನ

ಉಡುಪಿ: ಟೆಂಡರ್ ಕಂ-ಹರಾಜು ಮೂಲಕ ಜಿಲ್ಲೆಯಲ್ಲಿ ಮಾನವ ಶ್ರಮದಿಂದ ಮರಳು ಬ್ಲಾಕ್‍ಗಳನ್ನು ವಿಲೇವಾರಿ ಮಾಡುವ ಸಂಬಂಧ ಜರುಗಿದ, ಜಿಲ್ಲಾ ಮರಳು ಉಸ್ತುವಾರಿ ಉಪಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾದಂತೆ, ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾದ ಸಂಭವನೀಯ ಪಟ್ಟಿಯಲ್ಲಿರುವ ತಾತ್ಕಾಲಿಕ ಪರವಾನಿಗೆದಾರರು/ಪರವಾನಿಗೆದಾರರು ಉಡುಪಿ ಜಿಲ್ಲೆಯಲ್ಲಿ ಒಂದು ವರ್ಷದಿಂದ ವಾಸ್ತವ್ಯ ಹೊಂದಿರುವ ಬಗ್ಗೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರಿಂದ ವಾಸ ದೃಢೀಕರಣ ಪತ್ರವನ್ನು ಪಡೆದು ಹಾಗೂ ಸಾಂಪ್ರಾದಾಯಿಕವಾಗಿ ಮರಳು ತೆರವುಗೊಳಿಸಿರುವ ಬಗ್ಗೆ ಹೊಂದಿರುವ ದಾಖಲಾತಿ/ಪರವಾನಿಗೆ ಪ್ರತಿ ಹಾಗೂ ಇತರೆ ಪೂರಕ ದಾಖಲೆಗಳನ್ನು ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ಕಚೇರಿಗೆ ಸೆಪ್ಟಂಬರ್ 12 ರೊಳಗಾಗಿ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂ ವಿಜ್ಞಾನಿ ಯವರ ಕಚೇರಿ , ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಎ-ಬ್ಲಾಕ್, ಮೊದಲನೇ ಮಹಡಿ, ಮಣಿಪಾಲ, ಉಡುಪಿ ದೂರವಾಣಿ ಸಂ. 0820-2572333 ಸಂಪರ್ಕಿಸುವಂತೆ ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕಟಣೆ ತಿಳಿಸಿದೆ.