ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಕುಕ್ಕೆಹಳ್ಳಿ ಶಾಖೆ ಬ್ರಹ್ಮಾವರ ಮುಖ್ಯ ರಸ್ತೆಯ ಮಧುವನ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಳ್ಳು ತ್ತಿದ್ದು, ಈ ನೂತನ ಶಾಖೆಯ ಉದ್ಘಾಟನಾ ಸಮಾರಂಭವು ಇದೇ ಸೆಪ್ಟೆಂಬರ್ 4ರಂದು 10.30ಕ್ಕೆ ನಡೆಯಲಿದೆ.
ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಶೋಕ್ ಕಾಮತ್ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಮಣಿಪಾಲ ಆರ್ ಎಸ್ ಬಿ ಸಂಘದ ಅಧ್ಯಕ್ಷ ಗೋಕುಲದಾಸ್ ನಾಯಕ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಉದ್ಯಮಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯ ಗಣೇಶ್ ಕಿಣಿ ಬೆಳ್ವೆ, ಬ್ರಹ್ಮಾವರ ಸಿ.ಎ. ಬ್ಯಾಂಕ್ ನಿರ್ದೇಶಕ ಹಾಗೂ ಉದ್ಯಮಿ ರಾಜೇಶ್ ಶೆಟ್ಟಿ ಬಿರ್ತಿ, ಚಾಂತಾರು ಗ್ರಾ.ಪಂ ಅಧ್ಯಕ್ಷ ಬೇಬಿ ರಮೇಶ್ ಪೂಜಾರಿ, ಬ್ರಹ್ಮಾವರ ಮಧುವನ್ ಕಾಂಪ್ಲೆಕ್ಸ್ ಕಟ್ಟಡ ಮಾಲೀಕ ಶ್ಯಾಮ್ ಪೂಜಾರಿ ಮತ್ತು ಮೋಹನ್ ಕುಮಾರ್ ಕುಂಬ್ಳೆಕಾರ್ ಸಂಘಟನಾ ಪ್ರಮುಖ್ ಸಹಕಾರ ಭಾರತಿ ಮೈಸೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೊಸೈಟಿಯ ಉಪಾಧ್ಯಕ್ಷ ಪಾಂಡುರಂಗ ಕಾಮತ್ , ಮುಖ್ಯ ಕಾರ್ಯನಿರ್ವಾಹಕ ನಿತ್ಯಾನಂದ ನಾಯಕ್ ನರಸಿಂಗೆ, ಶಾಖಾ ವ್ಯವಸ್ಥಾಪಕ ಪ್ರಕಾಶ್ ನಾಯಕ್ ಉಪಸ್ಥಿತರಿರಲಿದ್ದಾರೆ.
ನಮ್ಮ ವೈಶಿಷ್ಟತೆ:
ಠೇವಣಿಗೆ ಅತ್ಯಾಕರ್ಷಕ ಬಡ್ಡಿದರ
ಸುಲಭ ಸಾಲ ಯೋಜನೆ
ಲಾಕರ್ ಸೌಲಭ್ಯ
ದುರ್ಗಾ ಶ್ರೀ ಸ್ವಸಹಾಯ ಗುಂಪುಗಳು
ಬಡ್ಡಿ ರಹಿತ ಸೋಲಾರ್ ಸಾಲ
ಇ- ಸ್ಟ್ಯಾಂಪಿಂಗ್ (ಪ್ರಧಾನ ಕಚೇರಿ ಪರ್ಕಳ)
RTGS, NEFT
ಹಿರಿಯ ನಾಗರಿಕರಿಗೆ 1 ವರ್ಷ ಮೇಲ್ಪಟ್ಟ ಠೇವಣಿಗೆ ಶೇ.0.50% ಅಧಿಕ ಬಡ್ಡಿ
ಸಾಲಗಳಿಗೆ ಸೇವಾ ಶುಲ್ಕ ಇರುವುದಿಲ್ಲ ಇದು ನಮ್ಮ ಸಂಸ್ಥೆಯ ವಿಶೇಷ ಕೊಡುಗೆ
ಸೇಫ್ ಲಾಕರ್ ಗಳ ಸೌಲಭ್ಯ ಮಿತಿದರದಲ್ಲಿ ಅನಿಯಮಿತ ಉಪಯೋಗ
ಸಂಪೂರ್ಣ ಗಣಕೀಕೃತ ಕೋರ್ ಬ್ಯಾಂಕಿಂಗ್ ವ್ಯವಸ್ಥೆ
ಪ್ರಧಾನ ಕಛೇರಿ, ಬಂಟಕಲ್ಲು ಶಾಖೆ, ಮಣಿಪಾಲ ಶಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ
ಸಂಸ್ಥೆಯ ಠೇವಣಿ ರೂ. 94 ಕೋಟಿ, ಸ್ವಂತ ನಿಧಿಗಳು ರೂ. 8.24 ಕೋಟಿ
2021- 22 ನೇ ಸಾಲಿನಲ್ಲಿ ರೂ.1.85 ಕೋಟಿ ನಿವ್ವಳ ಲಾಭ. ಅಡಿಟ್ ನಲ್ಲಿ ‘ಎ’ ಶ್ರೇಣಿಯ ವರ್ಗೀಕರಣ
20 ವರ್ಷಗಳಿಂದ ನಿರಂತರ ಡಿವಿಡೆಂಟ್ ನೀಡಿರುವ ಹಿರಿಮೆ.
ಶಾಖೆಗಳು: ಪ್ರಧಾನ ಕಚೇರಿ, ಪರ್ಕಳ,ಬಂಟಕಲ್ಲು ಶಾಖೆ, ಹಿರಿಯಡ್ಕ ಶಾಖೆ, 80 ಬಡಗುಬೆಟ್ಟು, ಮಣಿಪಾಲ, ಬ್ರಹ್ಮಾವರ ಶಾಖೆ, ಉಡುಪಿ ಶಾಖೆ.












