ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕ (ಕ್ಯೂ1)ದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 13.5 ರಷ್ಟು ಬೆಳವಣಿಗೆಯಾಗಿದೆ.
ಬುಧವಾರ ಬಿಡುಗಡೆಯಾದ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ತಾತ್ಕಾಲಿಕ ಅಂದಾಜಿನ ಪ್ರಕಾರ, 2022-23ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ (ಕ್ಯೂ1)ದಲ್ಲಿ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯವು ಶೇಕಡಾ 4.5 ರಷ್ಟು ಏರಿಕೆಯಾಗಿದೆ. ಉತ್ಪಾದನಾ ವಲಯವು ಶೇಕಡಾ 4.8 ರಷ್ಟು ಮತ್ತು ನಿರ್ಮಾಣ ವಲಯವು ಶೇಕಡಾ 16.8 ರಷ್ಟು ಬೆಳವಣಿಗೆಯಾಗಿದೆ. ಪ್ರಸಾರಕ್ಕೆ ಸಂಬಂಧಿಸಿದ ವ್ಯಾಪಾರ, ಹೋಟೆಲ್‌ಗಳು, ಸಾರಿಗೆ, ಸಂವಹನ ಮತ್ತು ಸೇವೆಗಳ ಜಿಡಿಪಿ ವಿಭಾಗವು ಪ್ರಸಕ್ತ ಹಣಕಾಸು ವರ್ಷದಲ್ಲಿ 25.7 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.
2011-12ರ ಬೆಲೆಯಲ್ಲಿ ಕಳೆದ ಹಣಕಾಸು ವರ್ಷದ ತ್ರೈಮಾಸಿಕದ 32 ಲಕ್ಷ ಮತ್ತು 46 ಸಾವಿರ ಕೋಟಿ ರೂಗೆ ಹೋಲಿಸಿದಲ್ಲಿ 2022-23 ರ ತ್ರೈಮಾಸಿಕದಲ್ಲಿ ನೈಜ ಜಿಡಿಪಿ 36 ಲಕ್ಷ ಮತ್ತು 85 ಸಾವಿರ ಕೋಟಿ ರೂಪಾಯಿಗಳ ಮಟ್ಟವನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. 2021-22ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ 20.1 ರಷ್ಟು ಬೆಳವಣಿಗೆ ಕಂಡಿದೆ.