ಯಕ್ಷ ಲೋಕದ ಮಯೂರಿ, ಈ ಉಜಿರೆಯ ಕುವರಿ: ಯಕ್ಷಗಾನದ “ನವ್ಯ”ಕಾವ್ಯ

ಈಗೀಗ ಯುವತಿಯರು ಯಕ್ಷಗಾನ ಕ್ಷೇತ್ರದಲ್ಲಿ ಗಮನಸೆಳೆಯುವಂತಹ ಸಾಧನೆ ಮಾಡುತ್ತಿದ್ದಾರೆ. ಅದರಲ್ಲೂ ಕರಾವಳಿಯ ಹುಡುಗಿಯರು ಯಾರಿಗೇನೂ ಕಡಿಮೆ ಇಲ್ಲ ಎನ್ನುವಂತೆ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅಂತಹ ಕರಾವಳಿಯ ಸಾಧಕಿಯ ಪೈಕಿ ಉಜಿರೆ ನವ್ಯ ಕೂಡ ಯಕ್ಷಗಾನ ಕ್ಷೇತ್ರದಲ್ಲಿ ನವ್ಯ ಕಾವ್ಯ ಬರೆಯುತ್ತಿದ್ದಾರೆ. ಯಕ್ಷಗಾನ ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಕುಣಿದು ಎಲ್ಲರ ಹುಬ್ಬೇರಿಸುತ್ತಿದ್ದಾರೆ.
 
ಯಕ್ಷಗಾನ ಕ್ಷೇತ್ರದಲ್ಲಿ ನವ್ಯ ಮಾರ್ಗ:
 ಬಹುಮುಖ ಪ್ರತಿಭೆ ನವ್ಯಹೊಳ್ಳ. ಯಕ್ಷಗಾನದ ಹಲವು ಪಾತ್ರಗಳಿಗೆ ಜೀವ ತುಂಬುತ್ತಿರುವ ಯುವ ಕಲಾವಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ ವಿಜಯಲಕ್ಷ್ಮಿ ಮತ್ತು ಸುರೇಶ್ ಹೊಳ್ಳ ದಂಪತಿಯ  ಪುತ್ರಿಯಾದ ನವ್ಯಾಗೆ ಬಾಲ್ಯದಿಂದಲೂ ಯಕ್ಷಗಾನ ಅಂದ್ರೆ ವಿಪರೀತ ಪ್ರೀತಿ.
ಭರತನಾಟ್ಯ ಕಲಿಕೆಯೊಂದಿಗೆ ಸಾಗುತ್ತಿದ್ದ ಈಕೆಯ ಮನಸ್ಸು ನಿಧಾನವಾಗಿ ಯಕ್ಷಗಾನದತ್ತ ಮುಖ ಮಾಡುವಂತೆ ಮಾಡಿತು. ಇದೇ ನವ್ಯಾಳ ಜೀವನದ ಒಂದು ನಿಜವಾದ ತಿರುವು.  ಮುಂದೆ ಯಕ್ಷಗಾನದಲ್ಲೂ ಬಣ್ಣ ಹಚ್ಚಿ ರಂಗ  ಸ್ಥಳ ಪ್ರವೇಶಿಸಿದ ನಂತರ ನವ್ಯಳ  ನಿಜವಾದ ಪ್ರತಿಭೆ  ಎಲ್ಲರ ಗಮನ ಸೆಳೆಯಿತು. ಅನೇಕ ಪಾತ್ರಗಳಿಗೆ ಬಣ್ಣ ಹಚ್ಚಿ ಜೀವ ತುಂಬುತ್ತಾ

ಯಾವುದೇ ಪಾತ್ರವನ್ನೂ ನಿಭಾಯಿಸಬಲ್ಲ ಅಸಾಧಾರಣ ಹಾಗೂ ಅದ್ಭುತ ಕಲಾವಿದೆಯಾಗಿ ಬೆಳೆಯುತ್ತಿದ್ದಾಳೆ ನವ್ಯ. ಈಗಷ್ಟೇ ತನ್ನ ಪದವಿ ಶಿಕ್ಷಣವನ್ನು ಮುಗಿಸಿರುವ ನವ್ಯಾಗೆ 

ಬಿಡುವಿನ ಸಮಯದಲ್ಲಿ ಯಕ್ಷ ಹಾಗೂ ನಾಟ್ಯ ರಂಗದಲ್ಲಿ ಛಾಯಾಚಿತ್ರಗಳನ್ನು ತನ್ನದೇ ಆದ ಶೈಲಿಯಲ್ಲಿ ಸೆರೆಹಿಡಿಯುವುದು ಹವ್ಯಾಸ.
ಅನೇಕ ಗೌರವ ,ಪ್ರಶಂಸೆ ಿವರ ಜೋಳಿಗೆಯನ್ನು ಸೇರಿವೆ. ನವ್ಯಾರ ಸಾಧನೆ ಈ ಕಾಲದ ಯುವಜನಕ್ಕೂ ಒಂದು ನೈಜ ಸ್ಪೂರ್ತಿ.
 
 ಬರಹ:
ಮಂಜುನಾಥ್ ಶೆಣೈ,ಉಡುಪಿ