ಲಂಡನ್: ಲಂಡನ್‌ನ ಮೆಲಿಸಾ ರೌಫ್ ಎಂಬ 20 ವರ್ಷದ ಯುವತಿ ಇತಿಹಾಸ ಸೃಷ್ಟಿಸಿದ್ದಾಳೆ. ರೌಫ್ ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಮೇಕ್ಅಪ್ ಇಲ್ಲದೆ ರ‍್ಯಾಂಪ್ ವಾಕ್ ಮಾಡಿದ ಮೊದಲ ಸ್ಪರ್ಧಿಯಾಗಿದ್ದಾರೆ. ಅವರೀಗ ಅಕ್ಟೋಬರ್ 17 ರಂದು ಫೈನಲ್‌ನಲ್ಲಿ 40 ಇತರ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಲಿದ್ದಾರೆ.
ಒಬ್ಬರು ತಮ್ಮ ಸ್ವಂತ ಚರ್ಮದಲ್ಲಿ (ತಾವು ಇರುವ ರೀತಿಯಲ್ಲಿ)ಸಂತೋಷವಾಗಿದ್ದಲ್ಲಿ ನಮ್ಮ ಮುಖವನ್ನು ಮೇಕ್ಅಪ್‌ನಿಂದ ಮುಚ್ಚಿಕೊಳ್ಳಬಾರದು ಎಂದೆನ್ನುತ್ತಾರೆ ಮೆಲಿಸಾ. ರಾಜ್ಯಶಾಸ್ತ್ರದ ವಿದ್ಯಾರ್ಥಿನಿಯಾಗಿರುವ ಮೆಲಿಸಾ, ಇತರ ಮಹಿಳೆಯರು ಮತ್ತು ಯುವತಿಯರು ತಮ್ಮ ನೈಸರ್ಗಿಕ ಸೌಂದರ್ಯವನ್ನು ಅನಾವರಣಗೊಳಿಸುವಂತೆ ಅವರನ್ನು ಪ್ರೋತ್ಸಾಹಿಸಲು ಬಯಸುತ್ತಾರೆ ಎಂದು ಹೇಳಿದ್ದಾರೆ.
“ಇದು ನನ್ನ ಮಟ್ಟಿಗೆ ಅರ್ಥಪೂರ್ಣವಾಗಿದೆ. ವಿವಿಧ ವಯಸ್ಸಿನ ಅನೇಕ ಹುಡುಗಿಯರು ಮೇಕ್ಅಪ್ ಧರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ಹಾಗೆ ಮಾಡಲು ಒತ್ತಡವನ್ನು ಅನುಭವಿಸುತ್ತಾರೆ. ಒಬ್ಬರು ತಮ್ಮ ಸ್ವಂತ ಚರ್ಮದಲ್ಲಿ ಸಂತೋಷವಾಗಿದ್ದರೆ ನಾವು ನಮ್ಮ ಮುಖವನ್ನು ಮೇಕಪ್‌ನಿಂದ ಮುಚ್ಚಿಕೊಳ್ಳುವಂತೆ ಮಾಡಬಾರದು. ನಮ್ಮ ನ್ಯೂನತೆಗಳು ನಾವು ಯಾರಾಗಿದ್ದೇವೆಯೋ ಅದನ್ನು ರೂಪಿಸುತ್ತದೆ ಮತ್ತು ಅದು ಪ್ರತಿಯೊಬ್ಬ ವ್ಯಕ್ತಿಯನ್ನು ಅನನ್ಯಗೊಳಿಸುತ್ತದೆ ”ಎಂದು ಅವರು ಯುಕೆ ಇಂಡಿಪೆಂಡೆಂಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮೆಲಿಸಾ ಚಿಕ್ಕ ವಯಸ್ಸಿನಲ್ಲೇ ಮೇಕ್ಅಪ್ ಧರಿಸಲು ಪ್ರಾರಂಭಿಸಿದ್ದರೂ, ಸ್ಪರ್ಧೆಗಾಗಿ ಸಂಪ್ರದಾಯವನ್ನು ತ್ಯಜಿಸಲು ನಿರ್ಧರಿಸಿದ್ದರು. 2019 ರಲ್ಲಿ ಸೌಂದರ್ಯ ಸ್ಪರ್ಧೆಗೆ ಸೇರಿಸಲಾದ “ಬೇರ್ ಫೇಸ್” ಸುತ್ತಿನಲ್ಲಿಯೂ ಮೆಲಿಸಾ ಗೆದ್ದಿದ್ದಾರೆ. ಸ್ಪರ್ಧೆಯ ಅಂತಿಮ ದಿನದಂದು ಮೆಲಿಸಾ ಮತ್ತೆ ಸೌಂದರ್ಯವರ್ಧಕಗಳನ್ನು ತ್ಯಜಿಸಲಿದ್ದಾರೆ ಎನ್ನಲಾಗಿದೆ.