ಮಣಿಪಾಲ: ಎಂಐಟಿ ವತಿಯಿಂದ ಅಕ್ಷಯ ಉರ್ಜಾ ದಿವಸ್ ಕಾರ್ಯಾಗಾರ

ಮಣಿಪಾಲ: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ (ಎಂ.ಐ.ಟಿ) ಆಗಸ್ಟ್ 20 ರಂದು ಅಕ್ಷಯ ಉರ್ಜಾ ದಿವಸ್ ಅನ್ನು ಆಚರಿಸಲಾಯಿತು. ಉಡುಪಿ ಮತ್ತು ಬ್ರಹ್ಮಾವರದ ಸರ್ಕಾರಿ ಶಾಲೆಗಳ 400 ವಿದ್ಯಾರ್ಥಿಗಳಿಗೆ ಸೌರಶಕ್ತಿ ಮತ್ತು ಹವಾಮಾನ ಬದಲಾವಣೆಯ ಭೀಕರ ಪರಿಣಾಮಗಳ ಕುರಿತು ಕಾರ್ಯಾಗಾರದ ಮೂಲಕ ಅರಿವು ಮೂಡಿಸಲಾಯಿತು. ಕಾರ್ಯಾಗಾರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್‌ಗಳನ್ನು ಜೋಡಿಸಲು ತರಬೇತಿ ನೀಡಲಾಯಿತು. ಆ ಬಳಿಕ ಈ ಸೋಲಾರ್ ಲ್ಯಾಂಪ್‌ಗಳನ್ನು ಶಾಲಾ ಶಿಕ್ಷಕರ ಸಹಿತ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಕೆ.ಶಿವರಾಜ್, ಶಿಕ್ಷಣಾಧಿಕಾರಿ ಶ್ರೀಮತಿ ಜಾಹ್ನವಿ, ಬ್ಲಾಕ್ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಎಂ.ಐ.ಟಿ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ಮತ್ತು ಎಂ.ಐ.ಟಿ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್ ಸಭೆಯಲ್ಲಿ ಭಾಗವಹಿಸಿ ಶಕ್ತಿ ಸ್ವರಾಜ್ಯ ಸಂದೇಶವನ್ನು ಬಲಪಡಿಸಿದರು.

ಈ ಕಾರ್ಯಕ್ರಮವನ್ನು ಡಾ. ನರೇಶ ಮಣಿ, ಸಹ ಪ್ರಾಧ್ಯಾಪಕರು, ಜೈವಿಕ ತಂತ್ರಜ್ಞಾನ ವಿಭಾಗ, ಸಿಬ್ಬಂದಿ ಸಂಯೋಜಕರು ಮತ್ತು ಎಂ.ಐ.ಟಿ ಯ ವಿವಿಧ ವಿದ್ಯಾರ್ಥಿ ಕ್ಲಬ್‌ಗಳ ಸಹಯೋಗದಲ್ಲಿ ಸಂಯೋಜಿಸಲಾಗಿತ್ತು.

ಡಾ. ಪ್ರವೀಣ್ ಕುಮಾರ್, ಡಾ. ಸುಚೇತಾ ಕೋಲೇಕರ್, ಡಾ. ಮೊಹಮ್ಮದ್ ಜುಬೇರ್, ಮನೋಜ್ ಉಪಸ್ಥಿತರಿದ್ದರು.

ಎಂ.ಐ.ಟಿ ಯ ಜೈವಿಕ ತಂತ್ರಜ್ಞಾನ ವಿಭಾಗದ ಡಾ.ವಿಜೇಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು.