ನವದೆಹಲಿ: ದುಬೈನಲ್ಲಿ ಪಾಕಿಸ್ತಾನ ವಿರುದ್ಧದ ಭಾರತದ ಬಹುನಿರೀಕ್ಷಿತ ಆರಂಭಿಕ ಪಂದ್ಯಕ್ಕೂ ಕೆಲವು ದಿನಗಳ ಮೊದಲೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೆ ಕೋವಿಡ್ -19 ದೃಢಪಟ್ಟಿದೆ. ಕೋಚ್ ರಾಹುಲ್ ದ್ರಾವಿಡ್ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದರಿಂದ ಅವರು ತಂಡದ ಜೊತೆ ದುಬೈಗೆ ತೆರಳುವುದು ಸಾಧ್ಯವಿಲ್ಲ. ಇದರಿಂದ ಏಷ್ಯಾ ಕಪ್ 2022 ಗೂ ಮುನ್ನವೆ ಭಾರತವು ದೊಡ್ಡ ಆಘಾತವನ್ನು ಅನುಭವಿಸಿದೆ. ಟಿ20 ವಿಶ್ವಕಪ್ಗೆ ಮುನ್ನ ಯುಎಇಗೆ ತೆರಳಿ ಕಾಂಟಿನೆಂಟಲ್ ಪಂದ್ಯಾವಳಿಯನ್ನು ಆಡಲಿರುವ ಭಾರತ ತಂಡವನ್ನು ದ್ರಾವಿಡ್ ಯಾವಾಗ ಸೇರಿಕೊಳ್ಳಬಹುದು ಎಂಬುದನ್ನು ಕಾದು ನೋಡಬೇಕಿದೆ.