ಮಾಹೆ: ತುಳು ಸಂಸ್ಕೃತಿ ಆಚಾರ ವಿಚಾರದ ಬಗ್ಗೆ ಅರಿವು ನೀಡುವ ಆನ್ ಲೈನ್ ಕೋರ್ಸ್ ಆರಂಭ

ಮಣಿಪಾಲ: ಉನ್ನತ ಶಿಕ್ಷಣವು ಸ್ಥಳೀಯ ಮತ್ತು ಜಾಗತಿಕ ಸಂಸ್ಕೃತಿ ನಡುವೆ ಸಂಪರ್ಕ ಸ್ಥಾಪಿಸುವಲ್ಲಿ ಅದರ ಅರ್ಥವನ್ನು ಕಂಡುಕೊಳ್ಳುತ್ತದೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ಅದರ ಜಾಗತಿಕ ದೃಷ್ಟಿಕೋನದ ಜೊತೆಗೆ ಸಮುದಾಯದೊಂದಿಗೆ ಸತತವಾಗಿ ಕೆಲಸ ಮಾಡುತ್ತಿದೆ. ತುಳುನಾಡಿನ ಸಂಸ್ಕೃತಿಯ ಆನ್‌ಲೈನ್ ಕೋರ್ಸ್ ಸ್ಥಳೀಯ ಮತ್ತು ಜಾಗತಿಕ ಸಂಸ್ಕೃತಿಗಳ ಛೇದಕದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಆಯಾಮವನ್ನು ನೀಡುವಂತಹ ಒಂದು ಪ್ರಯತ್ನವಾಗಿದೆ ಎಂದು ಬೆಂಗಳೂರಿನ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ಮಾಹೆಯ ಅಧ್ಯಕ್ಷ ಡಾ ರಂಜನ್ ಪೈ ಹೇಳಿದರು.

ಗುರುವಾರ ಮಾಹೆ ಕ್ಯಾಂಪಸ್ ನಲ್ಲಿ ವಿವೇಚನಾಶೀಲ ಭಾರತ: ಅಂತರ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರದ ತುಳುನಾಡಿನ ಜೀವಂತ ಸಂಸ್ಕೃತಿಗಳು ಆನ್‌ಲೈನ್ ಕೋರ್ಸ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಹೆಯ ಅಂಗಳದಲ್ಲಿ ಹುಲಿ ಕುಣಿತವನ್ನು ಉದ್ಘಾಟಿಸಿ ಮಾತನಾಡಿದ ಮಾಹೆಯ ಸಹ ಕುಲಪತಿ ಡಾ. ಎಚ್ ಎಸ್ ಬಲ್ಲಾಳ್ ಮಾಹೆಯು ಸ್ಥಳೀಯ ಕಲಾ ಪ್ರಕಾರ, ಸಾಹಿತ್ಯ ಮತ್ತು ಸಂಸ್ಕೃತಿಗಳೊಂದಿಗೆ ನಿಕಟ ಮತ್ತು ಸೌಹಾರ್ದ ಸಂಬಂಧವನ್ನು ಹೊಂದಿದೆ. ಈ ಕೋರ್ಸ್ ಈ ಕೋರ್ಸ್ ಈ ಭೂಮಿಯ ಸಂಸ್ಕೃತಿಯನ್ನು ಪೋಷಿಸುವುದಲ್ಲದೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದನ್ನು ಖಾತ್ರಿಗೊಳಿಸುತ್ತದೆ ಎಂದರು.

ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ಮಾಹೆಯ ರಿಜಿಸ್ಟ್ರಾರ್, ಡಾ ನಾರಾಯಣ ಸಭಾಹಿತ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಟೀಸರ್ ಬಿಡುಗಡೆಯು ಅಶೋಕ್ ರಾಜ್ ಕಾಡಬೆಟ್ಟು ಮತ್ತು ತಂಡದವರಿಂದ ಹುಲಿ ವೇಷ ಪ್ರದರ್ಶನದೊಂದಿಗೆ ನಡೆಯಿತು.

ಡಿಸರ್ನಿಂಗ್ ಇಂಡಿಯಾ ಯೋಜನೆಯ ಸಂಯೋಜಕ ಡಾ.ಪ್ರವೀಣ್ ಶೆಟ್ಟಿ ಕೋರ್ಸ್ ಅನ್ನು ಪರಿಚಯಿಸಿದರು.

ಕೋರ್ಸ್ ಈ ಕೆಳಗಿನ ಘಟಕಗಳನ್ನು ಒಳಗೊಂಡಿದೆ:
ನಾಟಕಮತ್ತು ಪ್ರದರ್ಶನ: ಯಕ್ಷಗಾನ; ಸಮುದಾಯ ಮತ್ತು ಕ್ರೀಡೆ: ಕಂಬಳ; ಪೂಜಾ ಸಂಪ್ರದಾಯಗಳು: ಭೂತಾರಾಧನೆ; ನಾಗಾರಾಧನೆ.

ಇದು ಎರಡು-ಕ್ರೆಡಿಟ್ ಆನ್‌ಲೈನ್ ಸರ್ಟಿಫಿಕೇಟ್ ಕೋರ್ಸ್ ಆಗಿದ್ದು, ಇಂಗ್ಲಿಷ್ ಭಾಷೆಯಲ್ಲಿದೆ ಮತ್ತು ವಿದ್ಯಾರ್ಥಿಗಳು ಹಾಗೂ ಪ್ರಪ್ರಂಚದಾದ್ಯಂತದ ಯಾರೇ ಆಗಿಲಿ ಇದನ್ನು ಕಲಿಯಬಹುದಾಗಿದೆ.

ವೆಬ್‌ಸೈಟ್‌ನಲ್ಲಿ ನೋಂದಣಿಗಾಗಿ: https://manipal.edu/cisd
ಕೋರ್ಸ್‌ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ: [email protected] ಅನ್ನು ಸಂಪರ್ಕಿಸಬಹುದು.