ಉಡುಪಿ: ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿಯವರ ಅಧ್ಯಕ್ಷತೆಯಲ್ಲಿ ಕ್ಷೇತ್ರದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಪ್ಪತ್ತೈದನೇ ಸ್ವಾತ್ಯಂತ್ರ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಜ್ಞಾ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ನ್ಯಾಯವಾದಿ ಯು. ಬಾಲ ಸುಬ್ರಹ್ಮಣ್ಯ ರಾವ್ ಅವರ ಅಧ್ಯಕ್ಷತೆ ವಹಿಸಿದ್ದರು.
ಮಣೂರು ನಾರಾಯಣ ಖಾರ್ವಿ ಅವರು ಧ್ವಜಾರೋಹಣ ಮಾಡಿ, ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಯುವ ಪೀಳಿಗೆಗೆ ಸಂದರ್ಭೋಚಿತವಾದ ಸಲಹೆಯನ್ನು ನೀಡಿ ಸ್ವಾತ್ಯಂತ್ರದ ಮಹತ್ವವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಕಾಷ್ಠಶಿಲ್ಪಿ ಜಗದೀಶ್ ಆಚಾರ್ಯಮತ್ತು ಅರ್ಚಕ ಅನೀಶ್ ಆಚಾರ್ಯ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಸ್ವಾತ್ಯಂತ್ರ ಮಹೋತ್ಸವದ ಬಗ್ಗೆ ಭಾಷಣವನ್ನು ಪ್ರಸ್ತುತಪಡಿಸಿದರು.
ದೈಹಿಕ ಶಿಕ್ಷಕ ರಾಘವೇಂದ್ರ ಯು, ಶಿಕ್ಷಕಿಯರಾದ ಶ್ರೀಮತಿ ಸುಚಿತ್ರಾ, ಪೂರ್ಣಿಮಾ, ತೀರ್ಥಕಲಾ, ಸಹಾಯಕಿಯರಾದ ಶ್ರೀಮತಿ ಕಲಾವತಿ ಆಚಾರ್ಯ ಹಾಗೂ ಜಯಂತಿ ಸಹಕರಿಸಿದರು.ವಿದ್ಯಾರ್ಥಿ ನಾಯಕ ಮನೋಜ್ ಕುಮಾರ್ ಹಾಗೂ ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕಿ ಅಂಜಲಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ದೀಪಾ ಪ್ರಭು ವಂದಿಸಿದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.